ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ಗುರುಪೂಜೆಯು ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಾಯಿ ಶ್ರೀ ಪದ್ಮ ವಿದ್ಯಾರ್ಥಿನಿ ವಿವೇಕಾನಂದ ಪದವಿ ಪೂರ್ವ ಕಾಲೇಜು ನೆಹರು ನಗರ ಪುತ್ತೂರು ಗುರುಪೂಜೆಯ ಮಹತ್ವ ವಿವರಿಸುತ್ತಾ, ಪ್ರಪಂಚದ ಸೃಷ್ಠಿಕರ್ತನಿಂದ ಹಿಡಿದು ಆಧ್ಯಾತ್ಮದವರೆಗಿನ ಎಲ್ಲ ವಿಚಾರಗಳನ್ನು ಮಾರ್ಗದರ್ಶನ ಮಾಡುವವನೇ ಗುರು. ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಲು ತತ್ವಜ್ಞಾನವೆಂಬ ಬೆಳಕನ್ನು ನೀಡುವವನೇ ಗುರು ಎಂದು ನುಡಿದರು.
ರವಿ ಮುಂಗ್ಲಿಮನೆ ಅಧ್ಯಕ್ಷರು, ಶಿಕ್ಷಕ-ರಕ್ಷಕ ಸಂಘ ಮಾತನಾಡಿ, ಭೇದ ಭಾವವಿಲ್ಲದೆ ಜಾತಿ, ಧರ್ಮಕ್ಕೂ ಮಿಗಿಲಾಗಿ ಶಿಷ್ಯನಿಗೆ ವಿದ್ಯಾದಾನ ಮಾಡುವವನೇ ಗುರು ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀಮತಿ ಪುಷ್ಪಲತಾ ಹಿರಿಯ ಶಿಕ್ಷಕಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ. ಶಿಕ್ಷಕಿಯರಾದ ಶ್ರೀಮತಿ ಯಶೋಧಾ, ಶ್ರೀಮತಿ ಭಾರತಿ ಜಿ ಮತ್ತು ಯೋಗ ಶಿಕ್ಷಕಿ ಶರಾವತಿ, ಯು.ಕೆ ಪೈ ಮೊದಲಾದವರು ಉಪಸ್ಥಿತರಿದ್ದರು.
ಅವನೀಶ್ ಮತ್ತು ನಿರೀಕ್ಷಾ ಕಾರ್ಯಕ್ರಮ ನಿರೂಪಿಸಿ, ರಿಷಿಕಾ ಸ್ವಾಗತಿಸಿದರು ಎಂದು ಮುಖ್ಯಗುರು ಶ್ರೀ ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿದರು.