ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಜಗನ್ನಾಥ್ ನಾಡಿಗೇರ ಅವರಿಂದ ಯಶಸ್ವಿ ವಿದ್ಯಾರ್ಥಿಯಾಗುವುದು ಹೇಗೆ ಎಂಬ ವಿಚಾರ ಸಂಕಿರಣ ಶಾಲಾ ಸಭಾಂಗಣದಲ್ಲಿ ಆಗಸ್ಟ್ 4 ರಂದು ನಡೆಯಿತು.
ಜಗನ್ನಾಥ್ ನಾಡಿಗೇರ, ದಾವಣಗೆರೆ ಇವರು ವಿಚಾರ ಸಂಕಿರಣ ನಡೆಸಿಕೊಟ್ಟು, ನೀರನ್ನು ಕುಡಿಯಲು ಇಷ್ಟಪಡುವ 100 ಕುದುರೆಗಳನ್ನು ಒಬ್ಬನಿಂದ ಕುಡಿಸಬಹುದು. ಆದರೆ ನೀರನ್ನು ಕುಡಿಯಲು ಇಷ್ಟಪಡದ ಒಂದು ಕುದುರೆಯನ್ನು 100 ಜನರಿಂದ ನೀರು ಕುಡಿಸಲು ಅಸಾಧ್ಯ. ಆದುದರಿಂದ ನಮ್ಮ ಮನಸ್ಸನ್ನು ಹತೋಟಿಯಲ್ಲಿಡುವುದು ಮತ್ತು ಏಕಾಗ್ರತೆಯಿಂದ ಇಡುವುದು ಕಲಿಕೆಗೆ ಪೂರಕ ಎಂದರು.
ಕೆ. ಜಯರಾಜ ಆಚಾರ್ ಅಧ್ಯಕ್ಷರು, ಸತ್ಯಸಾಯಿ ವಿದಾಕೇಂದ್ರ ಚೊಕ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ರಾಧಾಕೃಷ್ಣ ರೈ, ಹಿರಿಯ ಶಿಕ್ಷಕಿ ಮೋಹಿನಿ, ಪುಷ್ಪಲತಾ, ಸಾಯಿಗೀತಾ, ಸಿಂಧು ಉಪಸ್ಥಿತರಿದ್ದರು ಎಂದು ಮುಖ್ಯ ಗುರುಗಳಾದ ಸತೀಶ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.