QR Code Business Card

Adolescon 2015 -ಮಕ್ಕಳ ಯೂತ್ ಮೇಳ ಉದ್ಘಾಟನೆ

ವಿವೇಕಾನಂದ ವಿದ್ಯಾಸಂಸ್ಥೆಗಳು, ತೆಂಕಿಲ, ಪುತ್ತೂರು ಇದರ ಆಶ್ರಯದಲ್ಲಿ ದಿನಾಂಕ 13-08-2015 ನೇ ಗುರುವಾರದಂದು Adolescon 2015 – ಮಕ್ಕಳ ಯೂತ್ ಮೇಳ ದರ್ಶನ್ ಕಲಾ ಮಂದಿರದ ಸಭಾಭವನದಲ್ಲಿ ನಡೆಯಿತು.

DSCF4377

DSCF4379

DSCF4395

DSCF4399

DSCF4419

DSCF4420

DSCF4394

DSCF4390

ಡಾ.ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ದೇಹ ಬೆಳೆಯುತ್ತಿದ್ದಂತೆ ಮನಸ್ಸು ಬೆಳೆಯುತ್ತದೆ. ಸಮಾಜವನ್ನು ಸುಧಾರಣೆ ಮಾಡುವ ಮಕ್ಕಳಿಗೆ ಎಲ್ಲಾ ರೀತಿಯ ಬೆಳಕನ್ನು ಚೆಲ್ಲುವ ಕೆಲಸವನ್ನು ಹೆತ್ತವರು ಶಿಕ್ಷಕರು ಮಾಡಬೇಕು. ತಿಳಿದಿರುವ ವಿಷಯವನ್ನು ತಿಳಿಯದವನಿಗೆ ತಿಳಿದವನು ತಿಳಿಸುವುದೇ ಆರೋಗ್ಯ. ಇದುವೇ ಆರೋಗ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಡಾ.ಕೆ.ಎಂ.ಕೃಷ್ಣ ಭಟ್, ಅಧ್ಯಕ್ಷರು ವಿವೇಕಾನಂದ ವಿದ್ಯಾಸಂಸ್ಥೆಗಳು, ಪುತ್ತೂರು ಇವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಕ್ಕಳಲ್ಲಿ ಮೌಲ್ಯಗಳು ಬೆಳೆದಾಗ ಆತ್ಮಸ್ಥೈರ್ಯ ಬೆಳೆಯುತ್ತದೆ. ಆತ್ಮಸ್ಥೈರ್ಯದಿಂದ ಆರೋಗ್ಯ ಮತ್ತು ಯಶಸ್ಸು ದೊರೆಯುತ್ತದೆ ಎಂದರು.

ರವೀಂದ್ರ.ಪಿ, ಸಂಚಾಲಕರು, ವಿವೇಕಾನಂದ ವಿದ್ಯಾಸಂಸ್ಥೆಗಳು, ಪುತ್ತೂರು ಇವರು ಸ್ವಾಗತಿಸಿದರು. ಡಾ.ಸುಲೇಖ ವರದರಾಜ್, ಸ್ಥಳೀಯ ಸಂಯೋಜಕರು, ಯೂತ್ ಮೇಳ, ಪ್ರಾಸ್ತಾವಿಕ ಮಾತುಗಳನ್ನು ಆಡಿದರು.

ವೇದಿಕೆಯಲ್ಲಿ ಡಾ.ಜೆ.ಎಸ್. ತುತೇಜಾ, ರಾಷ್ಟ್ರೀಯ ಯೂತ್ ಮೇಳ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ರವಿ ಮುಂಗ್ಲಿಮನೆ ಹಾಗೂ ವಸಂತ ಸುವರ್ಣ, ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸತೀಶ್ ಕುಮಾರ್ ರೈ ಉಪಸ್ಥಿತರಿದ್ದರು. ಶಿಕ್ಷಕಿ ಸುಚಿತ್ರಾ ಪ್ರಭು ಮತ್ತು ಶಾಂತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಿಂಧು ವಿ.ಜಿ ವಂದಿಸಿದರು.