ಭಾರತೀಯ ಸೇನೆಯಲ್ಲಿ ದುಡಿಯುವುದು ಸಂತೋಷವನ್ನು ಕೊಡುವುದು, ಜೊತೆಗೆ ದೇಶಸೇವೆ ಮಾಡಿದ ಕೃತಾರ್ಥ ಭಾವನೆಯು ಉಂಟಾಗುತ್ತದೆ. ಭಾರತೀಯ ಸೇನೆಯ ಬಗ್ಗೆ ಎಲ್ಲರು ಅಂತೂ ದೇಶ ಸೇವೆಗೆ ಎಲ್ಲರೂ ಧುಮುಕಬೇಕೆಂದು ಭಾರತೀಯ ಸೇನೆಯ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಎಸ್.ಡಿ.ರಾಮಕಾಂತನ್ ಕರೆಕೊಟ್ಟರು. ಇವರು ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ, ಬಿ.ಎಡ್ ಮತ್ತು ಡಿ.ಎಡ್ ಶಾಲಾ- ಕಾಲೇಜುಗಳ ಜಂಟಿ ಸ್ವಾತಂತ್ರೋತ್ಸವದ ಧ್ವಜಾರೋಹಣ ಗೈದು ಮಾತನಾಡುತ್ತಿದ್ದರು.
ರವೀಂದ್ರ. ಪಿ ಸಂಚಾಲಕರು ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ, ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಡಾ| ಕೆ.ಎಮ್. ಕೃಷ್ಣ ಭಟ್ ಅಧ್ಯಕ್ಷರು ವಿವೇಕಾನಂದ ಆಂಗ್ಲ ಮಾಧ್ಯಮ, ಮತ್ತು ಕನ್ನಡ ಮಾಧ್ಯಮ ಶಾಲೆ, ಶೋಭಾ ಕೊಳತ್ತಾಯ ಸದಸ್ಯರು ವಿವೇಕಾನಂದ ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ ಶಾಲೆ. ಡಾ| ದಿನೇಶ್ ಚಂದ್ರ ಪ್ರಾಂಶುಪಾಲರು ವಿವೇಕಾನಂದ ಬಿ.ಎಡ್ ಕಾಲೇಜು, ಅನುರಾಧ ಪ್ರಾಂಶುಪಾಲರು ವಿವೇಕಾನಂದ ಡಿ.ಎಡ್ ಕಾಲೇಜು, ಅಚ್ಯುತ ನಾಯಕ್, ಖಜಾಂಜಿ, ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆ, ರವಿ ಮುಂಗ್ಲಿಮನೆ ಅಧ್ಯಕ್ಷರು, ರಕ್ಷಕ-ಶಿಕ್ಷಕ ಸಂಘ, ವಿವೇಕಾನಂದ ಆಂಗ್ಲ ಶಾಲೆ, ವಸಂತ ಸುವರ್ಣ ಅಧ್ಯಕ್ಷರು, ರಕ್ಷಕ-ಶಿಕ್ಷಕ ಸಂಘ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಸತೀಶ್ ಕುಮಾರ್ ರೈ ಮುಖ್ಯೋಪಾಧ್ಯಾಯರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ನಳಿನಿ ಮುಖ್ಯೋಪಾಧ್ಯಾಯಿನಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಉಪಸ್ಥಿತರಿದ್ದರು. ವತ್ಸಲಾ ರಾಜ್ಞಿ ಸ್ವಾಗತಿಸಿ, ಶೋಭಿತಾ ಸತೀಶ್ ವಂದಿಸಿ, ಪ್ರಸನ್ನ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.