QR Code Business Card

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ್ರ ಪುತ್ತೂರು ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಬೆಳಿಯೂರುಕಟ್ಟೆ, ಇದರ ಸಹಯೋಗದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೆಂಕಿಲ ಇಲ್ಲಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

Prathibha-Karanji-HS

ಹರ್ಷ.ಸಿ.ಎಸ್ – ರಸಪ್ರಶ್ನೆ – ಪ್ರಥಮ ಸ್ಥಾನ, ಇಂಗ್ಲೀಷ್ ಭಾಷಣ- ತೃತೀಯ ಸ್ಥಾನ, ಶ್ಯಾಮಪ್ರದೀಪ್, ಹರಿನಂದನ, ವಚನ್ ಜಾಲಾಡಿ- ರಸಪ್ರಶ್ನೆ – ಪ್ರಥಮ ಸ್ಥಾನ, ಅಮೃತಾಭಟ್- ಕರ್ನಾಟಕ ಸಂಗೀತ- ಪ್ರಥಮ ಸ್ಥಾನ, ಸುನಾದ್ ಭಟ್ -ಯಕ್ಷಗಾನ(ವೈ) -ಪ್ರಥಮ ಸ್ಥಾನ, ಆರಿನ್ ರಗ್ಷನ್- ಉರ್ದು ಭಾಷಣ – ಪ್ರಥಮ ಸ್ಥಾನ, ವಿಜ್ಞಾನ ಮಾದರಿ ತಯಾರಿ – ಸ್ವಸ್ತಿಕ್ ಪದ್ಮ ಮತ್ತು ನಿಶ್ಚಿತ್ ರೈ – ಪ್ರಥಮ ಸ್ಥಾನ, ಚರ್ಚಾಸ್ಪರ್ಧೆ – ವೈಷ್ಣವಿಭಟ್ ಪ್ರಥಮ ಸ್ಥಾನ, ನಿಧಿಶ್ರೀ- ಸಂಸ್ಕೃತ ಧಾರ್ಮಿಕಪಠಣ ದ್ವಿತೀಯ ಸ್ಥಾನ, ಕವ್ವಾಲಿ – ಅಕ್ಷತಾ ಶೆಟ್ಟಿ, ಆಶಿತಾ.ಜಿ, ಶೀತಲ್, ಕೇದಾರ- ದ್ವಿತೀಯ ಸ್ಥಾನ, ಪ್ರಿಯಂವದಾ – ಭಾವಗೀತೆ – ದ್ವಿತೀಯ ಸ್ಥಾನ, ಸಂಸ್ಕೃತ ಭಾಷಣ, ನಾಟಕ- ತೃತೀಯ ಸ್ಥಾನ, ಸಂಧ್ಯಾ.ಟಿ – ತಮಿಳು ಭಾಷಣ – ತೃತೀಯ ಸ್ಥಾನ, ನೇಹಾ.ಡಿ.ಅನಿಲಾಡೆ- ಗಝಲ್ – ತೃತೀಯ ಸ್ಥಾನ, ಸಿಂಚನಾ -ಭರತನಾಟ್ಯ- ತೃತೀಯ ಸ್ಥಾನ, ಸಂಜು, ಪವನ ಶೆಟ್ಟಿ, ಪ್ರತೀಕ್ಷ, ದೀಕ್ಷಿತ್, ತುಷಾರ್, ದೇವಿಕಾ, ಅಜಯ್.ಎನ್, ಸಂಜನಾ – ನಾಟಕ – ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.