ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಬೆಥನಿ ವಿದ್ಯಾಸಂಸ್ಥೆಗಳು ನೆಲ್ಯಾಡಿ ಇದರ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
17 ರ ವಯೋಮಾನದ ಬಾಲಕರ ವಿಭಾಗದಲ್ಲಿ
* ಪ್ರತೀಕ್ ಎತ್ತರ ಜಿಗಿತ ಪ್ರಥಮ, 100ಮೀ ಅಡೆ – ತಡೆ ಓಟ ತೃತೀಯ
* ಬೊಯಿಮಿ ಸುಚಿಯಾಂಗ್ ಹ್ಯಾಮರ್ ಎಸೆತ ಪ್ರಥಮ
* ಯೊಹಿಮಿ ಶಿಲ್ಲಾ 100 ಮೀ ಅಡೆ – ತಡೆ ಓಟ ದ್ವಿತೀಯ
* ಒಕ್ರಂ ಅಂಗದ್ ಸಿಂಗ್ ಗುಂಡು ಎಸೆತ ಪ್ರಥಮ
* ವಿನೀತ್ ಚಕ್ರ ಎಸೆತ ಪ್ರಥಮ.
17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ
* ಕೃತಿಕಾ ಪೆರ್‍ವೋಡಿ, ಲಹರಿ, ಅನುಷಾ ಪ್ರಭು, ಸ್ನೇಹ ಶೆಟ್ಟಿ ತಂಡ 4 x 100 ಮೀ ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
* 14 ರ ವಯೋಮಾನದ ಬಾಲಕರ ವಿಭಾಗದಲ್ಲಿ ಅಭಿಷೇಕ್ 600 ಮೀ, 400 ಮೀ, 4 x 100 ರಿಲೇ ಪ್ರಥಮ.
* ಪುಲ್ಮೀದಕರ್ ಗುಂಡು ಎಸೆತ ಪ್ರಥಮ, 600 ಮೀ ಓಟ ದ್ವಿತೀಯ.
* ಪಿನ್ಯೋಲಾಡ್ ಉದ್ದ ಜಿಗಿತ ಪ್ರಥಮ, 4 x 100 ರಿಲೇ ಪ್ರಥಮ
* ತುಷಾರ್ 4 x 100 ರಿಲೇ ಪ್ರಥಮ
* ಯೈನಿಮಿಕಿ ಸಾಮ್‌ಲಾಯ್ 4 x 100 ರಿಲೇ ಪ್ರಥಮ
* ಸುಶಾಂತ್ ಗುಂಡು ಎಸೆತದಲ್ಲಿ ತೃತೀಯ
* ಮ್ಯಾಥ್ಯೂಸ್ 80 ಮೀ ಅಡೆ – ತಡೆ ಓಟ ಪ್ರಥಮ.
14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಶುತ ಶೆಟ್ಟಿ 80 ಮೀ ಅಡೆ – ತಡೆ ಓಟ ದ್ವಿತೀಯ ಸ್ಥಾನ ಪಡೆದು ಆಳ್ವಾಸ್ ವಿದ್ಯಾಸಂಸ್ಥೆಗಳು ಮೂಡಬಿದಿರೆಯಲ್ಲಿ ನವೆಂಬರ್ 13-14 ರಂದು ನಡೆಯುವ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಇವರನ್ನು ದೈಹಿಕ ಶಿಕ್ಷಕರಾದ ಭಾಸ್ಕರ ಗೌಡ, ಗಿರೀಶ್, ಹರ್ಷಿತಾ, ಅಶ್ವಿತಾ, ಆಶಾಲತಾ ತರಬೇತುಗೊಳಿಸಿದ್ದಾರೆ ಎಂದು ಶಾಲಾ ಮುಖ್ಯಗುರುಗಳಾದ ಸತೀಶ್ ರೈ ತಿಳಿಸಿದ್ದಾರೆ.