QR Code Business Card

ವಿದ್ಯಾರ್ಥಿಗಳಿಂದ ಭತ್ತದ ಪೈರಿನಿಂದ ಭತ್ತ ಬೇರ್ಪಡಿಸುವ ಕಾಯಕ

2011 ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಕೃಷಿಯನ್ನೇ ನೆಚ್ಚಿಕೊಂಡ ಜನರ ಪ್ರಮಾಣ ಶೇ 54. ಹಿಂದಿನಂತೆ ಈಗಲೂ ನಾವು ಬೇಸಾಯದ ಮೇಲೆ ಹೆಚ್ಚು ಅವಲಂಬಿತರು. ಕೃಷಿ ಪ್ರಧಾನ ಕರ್ನಾಟಕಕ್ಕೆ ರೈತರೆ ಬೆನ್ನೆಲುಬು.

ಮಾರುಕಟ್ಟೆ ಇಡೀ ಜಗತ್ತನ್ನೇ ಆವರಿಸಿಕೊಂಡಿರುವ ಈ ದಿನಗಳಲ್ಲಿ ಬೇಸಾಯವನ್ನು ಮುಂದುವರಿಸುವವರು ನಗರೀಕರಣದ ಪ್ರಭಾವದಿಂದ ಸ್ವಲ್ಪ ಕಡಿಮೆಯೆಂದೇ ಹೇಳಬಹುದು. ಬೆವರು ಸುರಿಸುವ ಬೇಸಾಯಗಾರರು, ಕಷ್ಟಪಡುವ ಕೂಲಿಗಳು ಇವತ್ತು ನಾವು ಕಾಣಬೇಕಾದರೆ ಉತ್ತರಕನ್ನಡ ಅಥವಾ ಮೈಸೂರಿನ ಕೆಲ ಗ್ರಾಮಗಳಿಗೆ ಭೇಟಿ ಕೊಡಬೇಕಷ್ಟೆ.

IMG-20151105-WA0014

IMG-20151104-WA0039

IMG-20151104-WA0041

IMG-20151105-WA0015

ಆದರೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿಗಳು ಸ್ವತಃ ಗದ್ದೆಗೆ ಇಳಿದು ಭತ್ತದ ಪೈರು ಹಿಡಿದು, ಹೊಡೆದು ಭತ್ತವನ್ನು ವಿಂಗಡಿಸಿ ಸಂಭ್ರಮ ಪಟ್ಟರು. ಎಲ್ಲಾ ಮಕ್ಕಳು ಭತ್ತದ ತೆನೆಗಳಿರುವ ಪೈರುಗಳ ಕಟ್ಟು ಹಿಡಿದು ಭತ್ತ ವಿಂಗಡಿಸುವ ರೀತಿಯನ್ನು ಕಂಡು ಎಲ್ಲರು ಆಶ್ಚರ್ಯ ಪಟ್ಟರು. ತೆಂಕಿಲ ಶಾಲಾ ಬಳಿ ಶ್ರೀಧರ ಗೌಡರ ಗದ್ದೆಯಲ್ಲಿ ಶಿಕ್ಷಕಿ ಸುಗೀತಾ ರೈ ಮಾರ್ಗದರ್ಶನದಲ್ಲಿ ಕೃಷಿಯನ್ನು ಹತ್ತಿರದಿಂದ ನೋಡುವ ಮೂಲಕ ಶಿಕ್ಷಣ ಪಡೆಯುವ ವಿನೂತನ ಕಲಿಕೆಯ ಪ್ರಯತ್ನ ಮಾಡಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ತಮ್ಮ ವಿಭಿನ್ನ ಸಾಮರ್ಥ್ಯ ತೋರಿಸುವುದಕ್ಕೆ ಶಾಲಾ ಮುಖ್ಯ ಗುರುಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೀಗೆ ವಿದ್ಯಾರ್ಥಿಗಳಲ್ಲಿ ಕೃಷಿ, ಬೇಸಾಯ ಪ್ರೇಮ ಬೆಳೆಸುವಲ್ಲಿ ವಿವೇಕಾನಂದ ಶಾಲೆ ಒಂದು ಹೆಜ್ಜೆ ಮುಂದೆ ಇಟ್ಟಿದೆ.