ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಪ್ರಗತಿ ವಿದ್ಯಾಸಂಸ್ಥೆಗಳು ಕಾಣಿಯೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ. ಕಿರಿಯ ಪ್ರಾಥಮಿಕ ವಿಭಾಗದ ಅಭಿನಯ ಗೀತೆಯಲ್ಲಿ ಮೌಲ್ಯ (4ನೇ), ಛದ್ಮವೇಷದಲ್ಲಿ ಪುಣ್ಯ ಆರ್. ಎನ್ (4ನೇ), ಹಿರಿಯ ಪ್ರಾಥಮಿಕ ವಿಭಾಗದ ಲಘು ಸಂಗೀತದಲ್ಲಿ ಸನ್ನಿಧಿ ಕಜೆ (7ನೇ), ಅಭಿನಯ ಗೀತೆಯಲ್ಲಿ ಮೇಧಾ ಅಡಿಗ (6ನೇ), ದೇಶಭಕ್ತಿಗೀತೆಯಲ್ಲಿ (7ನೇ) ಭೂಮಿಜಾ, ಸ್ವಾತಿ ಉಪಾಧ್ಯ, ಶಶಾಂಕ್ ಬಿ.ಎಮ್, ದಿಶಾ ರಾವ್, ನವ್ಯಶ್ರೀ ಭಟ್, (5ನೇ) ಶ್ರೀರಾಮ ಭಟ್ ಹಾಗೂ ಪ್ರೌಢಶಾಲಾ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ (10ನೇ) ನಿಧಿಶ್ರೀ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಿರಿಯ ವಿಭಾಗದ ರಸಪ್ರಶ್ನೆಯಲ್ಲಿ ಶಿವಚೇತನ್, ಆಕಾಂಕ್ಷ, ಧನುಷ್ ರಾಮ್, ಅನೂಪ್, ಕಥೆ ಹೇಳುವುದರಲ್ಲಿ ಅನಘಾ ಕೆ.ಎ, ಇಂಗ್ಲೀಷ್ ಕಂಠಪಾಠದಲ್ಲಿ ಆತ್ಮೀಯ ಕಶ್ಯಪ್, ಪ್ರೌಢಶಾಲಾ ವಿಭಾಗದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ (8ನೇ) ಅಮೃತಾ ಭಟ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಪ್ರೌಢಶಾಲಾ ವಿಭಾಗದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ (10ನೇ) ನಿರೀಕ್ಷಾ, ಉರ್ದು ಭಾಷಣದಲ್ಲಿ (೮ನೇ) ಆರಿನ್ ರಗ್ಶನ್, ಭಾವಗೀತೆಯಲ್ಲಿ (9ನೇ) ಪ್ರಿಯಂವದಾ, ವೈಯಕ್ತಿಕ ಯಕ್ಷಗಾನದಲ್ಲಿ (9ನೇ) ಸುನಾದ್ ಭಟ್, ಕವಾಲಿಯಲ್ಲಿ (10ನೇ) ಅಕ್ಷತಾ ಶೆಟ್ಟಿ, ಶೀತಲ್, ಆಶಿತಾ, (9ನೇ) ಸುಪ್ರೀತ್ ಶೆಣೈ ತೃತೀಯ ಸ್ಥಾನ ಪಡೆದಿರುತ್ತಾರೆ. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.