QR Code Business Card

ವಿವೇಕಾನಂದಕ್ಕೆ ರಾಜ್ಯಮಟ್ಟದ ಚದುರಂಗದಲ್ಲಿ ಹಲವು ಪ್ರಶಸ್ತಿ

ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ, ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆ-2015-16 ರ ಗದಗ ಜಿಲ್ಲೆಯ ಸ್ವಾಮಿ ವಿವೇಕಾನಂದ ಸಂಸ್ಥೆಯಲ್ಲಿ ನಡೆದ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಗೆದ್ದುಕೊಂಡಿದೆ ಮತ್ತು ಆಂದ್ರಪದೇಶದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಚದುರಂಗ ಪಂದ್ಯಾಟಕ್ಕೆ ಶಾಲಾ ತಂಡ ಆಯ್ಕೆಯಾಗಿರುತ್ತದೆ.

DSCF5604

17 ರ ವಯೋಮಾನದ ಬಾಲಕರ ವಿಭಾಗದಲ್ಲಿ ಚಿರಾಗ್.ಜಿ.ಜೆ, 10 ನೇ ತರಗತಿ(ಜಯರಾಮ ಗೌಡ ಹಿರಿಂಜ, ಗೀತಾ.ಬಿ.ವಿ ಇವರ ಪುತ್ರ)ವೈಯಕ್ತಿಕ ಪ್ರಶಸ್ತಿ ಪಡೆದಿರುತ್ತಾನೆ. ಶಶಾಂಕ್.ಎಸ್.ಎಲ್, 9ನೇ ತರಗತಿ(ಲಿಂಗಪ್ಪ ಗೌಡ ಮತ್ತು ವಾಣಿಶ್ರೀ ಇವರ ಪುತ್ರ) 5ನೇ ಸ್ಥಾನ, ಇವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಚಿರಾಗ್ ಹಿರಿಂಜ, 17ರ ವಯೋಮಾನದ ಬಾಲಕರ ತಂಡದ ನಾಯಕ್ವ ವಹಿಸಲಿದ್ದಾನೆ.

ಶಶಾಂಕ್ ಭಟ್.ಜಿ.ಎಸ್, 8ನೇ ತರಗತಿ (ಶಿವಕುಮಾರ್, ದೀಪಾರ ಪುತ್ರ)6ನೇ ಸ್ಥಾನ, ಶ್ರೀದೇವಿ ಕೋಟೆ, 8ನೇ ತರಗತಿ(ಸತ್ಯನಾರಾಯಣ ಕೋಟೆ, ಶಾಂತಾ ಕೋಟೆ ಇವರ ಪುತ್ರಿ)7ನೇ ಸ್ಥಾನ, ದೀಪ್ತಿಲಕ್ಷ್ಮಿ, 5ನೇ ತರಗತಿ(ಶಂಕರ ಪ್ರಸಾದ್ ಇವರ ಪುತ್ರಿ)6ನೇ ಸ್ಥಾನ, ಶುಭಶ್ರೀ, 6ನೇ ತರಗತಿ(ಶ್ರೀಕೃಷ್ಣ ಭಟ್, ಶಾಲಿನಿ ಇವರ ಪುತ್ರಿ)9ನೇ ಸ್ಥಾನ, ಪಂಚಮಿ ಸರ್ಪಂಗಳ, 9ನೇ ತರಗತಿ(ಮಹಾಲಿಂಗಪ್ರಸಾದ್ ಇವರ ಪುತ್ರಿ)10ನೇ ಸ್ಥಾನ ಪಡೆದಿದ್ದಾರೆ. ದೀಕ್ಷಾ.ಡಿ.ಎ, 10ನೇ ತರಗತಿ (ದಿನೇಶ್ ಕುಮಾರ್, ರೇಖಾ.ಡಿ ಇವರ ಪುತ್ರಿ) ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾಳೆ. ತಂಡ ವ್ಯವಸ್ಥಾಪಕರಾಗಿ ಶಿವಪ್ರಸಾದ್, ಹರ್ಷಿತಾ.ಎಸ್, ಭಾಸ್ಕರ್ ಗೌಡ, ದೈಹಿಕ ಶಿಕ್ಷಕರು, ಮತ್ತು ಸತೀಶ್ ಕುಮಾರ್ ರೈ, ಮುಖ್ಯೋಪಾಧ್ಯಾಯರನ್ನು ಚಿತ್ರದಲ್ಲಿ ಕಾಣಬಹುದು.