ದಿನಾಂಕ 20-11-2015 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 9ನೇ ಮತ್ತು 10ನೇ ತರಗತಿಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಕೃಷಿ-ಬೇಸಾಯ ಮತ್ತು ಭತ್ತ ಕಾಟಾವು ವಿಷಯವಾಗಿ ಒಂದು ದಿನದ ಪ್ರಾತ್ಯಕ್ಷಿಕೆಯು ಪುತೂರು ತಾಲೂಕು ಕಬಕದ ಕುಂಜಾರು ದೇವಸ್ಥಾನದ ಬಳಿಯ ಬಾಲಕೃಷ್ಣರ ಭತ್ತದ ಗದ್ದೆಯಲ್ಲಿ ನಡೆಯಿತು. ಸ್ವತಃ ಮಕ್ಕಳೆ ಭತ್ತದ ಗದ್ದೆಯಲ್ಲಿ ಕೊಯ್ಲು ಕಾರ್ಯದಲ್ಲಿ ಭಾಗವಹಿಸಿ ನೈತಿಕ ಶಿಕ್ಷಣ ಪಡೆದು ಸಂತೋಷಪಟ್ಟರು. ಶಾಲಾ ಶಿಕ್ಷಕರಾದ ಶ್ರೀ ಮಂಜುನಾಥ ಹಾಗೂ ಶ್ರೀಮತಿ ಅನುರಾಧ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.