ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇದರ 2015-16 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ನವೆಂಬರ್ 25 ರಂದು ಶಾಲಾ ಕ್ರೀಡಾಂಗಣದಲ್ಲಿ ಉದ್ಘಾಟಿಸಲಾಯಿತು.
ಜಿ.ಎಲ್. ಆಚಾರ್ಯ ಜ್ಯುವೆಲ್ಲರಿಯ ಸಹ ವ್ಯವಸ್ಥಾಪಕರಾದ ಸುದನ್ವ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಪ್ರತಿಯೊಬ್ಬರು ಕ್ರೀಡಾ ಸ್ಫೂರ್ತಿಯಿಂದ ಮತ್ತು ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದರು. ಭಾರತೀಯ ವಾಯುಸೇನೆಯ ಫ್ಲೈಯಿಂಗ್ ಅಧಿಕಾರಿಯಾಗಿರುವ ಶರತ್ ಬಿ.ಎಂ. ಮುಖ್ಯ ಅತಿಥಿಯಾಗಿ ಆಗಮಿಸಿ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುವುದು ಪ್ರಮುಖವಾದುದು. ಪ್ರತಿಯೊಬ್ಬರೂ ತಮ್ಮದೇ ಆದ ಸಾಮರ್ಥ್ಯ ಪಡೆದಿದ್ದು, ಕೆಲವರು ವೈದ್ಯರಾಗುತ್ತಾರೆ, ಇನ್ನು ಕೆಲವರು ಶಿಕ್ಷಕರಾಗುತ್ತಾರೆ. ಎಲ್ಲದಕ್ಕೂ ಮಿಗಿಲಾಗಿ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗುತ್ತದೆ ಎಂದರು.
ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿರುವ ಡಾ| ಕೆ.ಎಂ.ಕೃಷ್ಣ ಭಟ್ ಕೊಂಕೋಡಿ ಮಾತನಾಡಿ, ಅಶಕ್ತ ದೇಹದಲ್ಲಿ ಸಶಕ್ತ ಮನಸ್ಸು ಇರುವುದಿಲ್ಲ. ಅದಕ್ಕೆ ಕ್ರೀಡೆ ಅನಿವಾರ್ಯವಾಗಿ ಬೇಕು ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯೆ ಸುಲೇಖಾ ವರದರಾಜ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯೆ ರೂಪಲೇಖ, ನಿಕಟಪೂರ್ವ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಗ್ರಾಮ ವಿಕಾಸ ಯೋಜನೆಯ ಸಂಚಾಲಕರಾದ ವಿನೋದ್ ಕುಮಾರ್ ರೈ ಗುತ್ತು, ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮನಾಕ್, ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿ ನಿರ್ಮಲ್ ಕುಮಾರ್, ಕೆ.ಜಿ. ವಿಭಾಗದ ಮುಖ್ಯಸ್ಥೆ ಮಮತಾ ಕೆ ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯನ್ನು ಮುನ್ನಡೆಸುವ ನಾಯಕ ಚಿರಾಗ್ ಹಿರಿಂಜ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಮುಖ್ಯಗುರು ಸತೀಶ್ ಕುಮಾರ್ ರೈ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶ್ರೀರಾಮ ಕಲ್ಲಡ್ಕದ ದೈಹಿಕ ಶಿಕ್ಷಕ ಕರುಣಾಕರ ರೆಫ್ರಿಯಾಗಿ ಸಹಕರಿಸಿದರು. ಶಿಕ್ಷಕಿ ಅನುರಾಧ ವಂದಿಸಿ, ಶಿಕ್ಷಕಿ ಸುಚಿತ್ರಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.