ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ಮೂವರು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ.
ಬಾಲವರ್ಗದಲ್ಲಿ 7ನೇ ತರಗತಿಯ ಧ್ಯಾನ್ (ಶ್ರೀನಾಥ್ ಮತ್ತು ಶಾಂತಿ ಪುತ್ತೂರು, ಇವರ ಪುತ್ರ) ಮತ್ತು ವಿಕ್ರಂ ಆಳ್ವ (ಕೃಷ್ಣ ಪ್ರಸಾದ್ ಆಳ್ವ ಚೆಲ್ಯಡ್ಕ, ಇವರ ಪುತ್ರ) ಇವರು ಜಂಟಿಯಾಗಿ ಮಂಡಿಸಿದ ನವಚಾಲಿತ ಮಾದರಿಗೆ ಪ್ರಥಮ ಪ್ರಶಸ್ತಿ ಹಾಗೂ ನಗದು ಬಹುಮಾನ ದೊರೆತಿದೆ.
ಕಿಶೋರ ವರ್ಗದಲ್ಲಿ 9ನೇ ತರಗತಿ ನಿಶ್ಚಿತ್ ರೈ (ವೇಣುಗೋಪಾಲ ರೈ ಮತ್ತು ಸುಗೀತ ರೈ ಇವರ ಪುತ್ರ) ಇವರು ಮಂಡಿಸಿದ ಅಸಾಂಪ್ರದಾಯಿಕ ಶಕ್ತಿಯ ಆಕರಗಳು ಎಂಬ ವಿಜ್ಞಾನ ಮಾದರಿಗೆ ದ್ವಿತೀಯ ಪ್ರಶಸ್ತಿ ಮತ್ತು ನಗದು ಬಹುಮಾನ ದೊರೆತಿದೆ.
ಇವರಿಗೆ ಶಿಕ್ಷಕಿಯರಾದ ಶಾರದ ಶೆಟ್ಟಿ, ಸುಗೀತಾ ರೈ ಮತ್ತು ಶಿಕ್ಷಕ ರಾಜಶೇಖರ ತರಬೇತಿ ನೀಡಿದ್ದಾರೆಂದು ಶಾಲಾ ಮುಖ್ಯಗುರುಗಳು ತಿಳಿಸಿದ್ದಾರೆ.