QR Code Business Card

ಪೋಷಕರ ಸಭೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು, ಇದರ 6ನೇ ತರಗತಿ ವಿದ್ಯಾರ್ಥಿಗಳ ವರ್ಷದ ಮೊದಲ ಪೋಷಕರ ಸಭೆಯು ದಿನಾಂಕ 8-7-2016 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಸರಸ್ವತಿ ವಿದ್ಯಾಲಯ, ಕಡಬ ಇದರ ಸಂಚಾಲಕರಾದ ವೆಂಕಟರಮಣ ರಾವ್ ಮುಖ್ಯ ಅತಿಥಿಯಾಗಿ ಆಗಮಿಸಿ, ವಿದ್ಯೆ ಇರುವುದು ಆನಂದವಾಗಿರಲು. ಜೀವನದಲ್ಲಿ ಆನಂದವಾಗಿರಲು ಬೇಕಾದ ಧರ್ಮ, ಅರ್ಥ, ಕಾಮ, ಮೋಕ್ಷ ಸಂಪಾದಿಸಲು ವಿದ್ಯೆಯ ಅವಶ್ಯಕತೆಯಿದೆ. ಉತ್ತಮ ಅಂಕಗಳ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಮನೆಯಲ್ಲಿ ಸಂಸ್ಕಾರ ನೀಡಬೇಕು ಎಂದರು. ಮುಖ್ಯೋಪಾಧ್ಯಾಯರು ಸತೀಶ್‌ಕುಮಾರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಶ್ರೀ ರಾಮ ನಾಕ್, ಶ್ರೀಮತಿ ಮಮತಾ.ಆರ್ ಉಪಸ್ಥಿತರಿದ್ದರು. ಶಿಕ್ಷಕಿ ರತ್ನಮಾಲ ಕಾರ್ಯಕ್ರಮ ನಿರ್ವಹಿಸಿದರು.

IMG-20160708-WA0016

IMG-20160708-WA0015