ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 19-07-2016 ರಂದು 3 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಪುತ್ತೂರಿನ ವಕೀಲರಾದ ವಿನಾಯಕರಾಂ ಮುಖ್ಯ ಅತಿಥಿಯಾಗಿ ಆಗಮಿಸಿ ಮಗುವಿನ ಬಗೆಗೆ ಕನಸು ಕಾಣುವುದರ ಬದಲು ಮಗು ಕನಸು ಕಾಣಲು ಬಿಡಬೇಕು. ಮಕ್ಕಳು ವಿದ್ಯಾಭ್ಯಾಸ ಮಾಡಲು ಪೂರಕವಾದ ವಾತಾವರಣ, ಭೌತಿಕ ವ್ಯವಸ್ಥೆ, ಪರಿಸರ ಒದಗಿಸುವುದು ಪೋಷಕರ ಕರ್ತವ್ಯ, ಮಾನಸಿಕ ಸಮತೋಲನದಿಂದ ವಿದ್ಯಾರ್ಜನೆ ಸಾಧ್ಯ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿ ಸದಸ್ಯೆ ಶೋಭಾ ಕೊಳತ್ತಾಯ ಸಾಂಧರ್ಬಿಕವಾಗಿ ಮಾತನಾಡಿದರು. ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮ ನಾಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್ ರೈ, ಕೆ.ಜಿ.ವಿಭಾಗದ ಮುಖ್ಯಸ್ಥೆ ಮಮತಾ.ಆರ್ ಹಾಗೂ ತರಗತಿ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ಪ್ರಾರ್ಥಿಸಿ, ಶಿಕ್ಷಕಿ ರಶ್ಮಿ ವಂದಿಸಿ, ಶಿಕ್ಷಕಿ ಶಾಂತಿ ಕಾರ್ಯಕ್ರಮ ನಿರ್ವಹಿಸಿದರು.