ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ದಿನಾಂಕ 22-08-2016 ರಂದು ಸೈಂಟ್ ಮೇರಿಸ್ ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆ, ಉಪ್ಪಿನಂಗಡಿಯಲ್ಲಿ ಜರುಗಿತು. ಕಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಗಳಾದ ಭಕ್ತಿಗೀತೆ- ತನ್ವಿ ಶೆಣೈ (4ನೇ) ಪ್ರಥಮ, ರಸಪ್ರಶ್ನೆ – ಧನುಷ್ ರಾಮ್ (4ನೇ), ತೇಜಸ್ (4ನೇ), ನಿನಾದ್ ಜಿ. ರೈ (4ನೇ), ಅನೂಪ್ (4ನೇ), ಹೇಮಂತ್ ಘಾಟೆ (4ನೇ), ಸಹನ್ (4ನೇ)- ಪ್ರಥಮ ಹಾಗೂ ಲಘುಸಂಗೀತ – ಸಾನ್ವಿ ಕಜೆ (4ನೇ), ದ್ವಿತೀಯ ಸ್ಥಾನವನ್ನು ಪಡೆದು 7 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಂಸ್ಕೃತ ಕಂಠಪಾಠ – ರಾಕೇಶ್ ಕೃಷ್ಣ (7ನೇ) ಪ್ರಥಮ, ಭಕ್ತಿಗೀತೆ -ಮೇಧಾ ಸಿ ಅಡಿಗ (7ನೇ) ಪ್ರಥಮ, ದೇಶಭಕ್ತಿ ಗೀತೆ – ಅನನ್ಯ (7ನೇ), ಅಂಜನಾ (7ನೇ), ಅನ್ವಿತಾ (7ನೇ), ಸ್ವೀಕೃತ (7ನೇ), ಮೈಥಿಲಿದೇವಿ (7ನೇ), ಹಿತ ಕಜೆ (6ನೇ) ಪ್ರಥಮ, ಧಾರ್ಮಿಕ ಪಠಣ – ಸಂಸ್ಕೃತ – ತನ್ಮಯಿ (5ನೇ) ದ್ವಿತೀಯ ಹಾಗೂ ತುಳು ಕಂಠಪಾಠ – ಯಶಸ್ವಿನಿ (6ನೇ) ತೃತೀಯ ಸ್ಥಾನವನ್ನು ಗಳಿಸಿ 8 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತಾಲೂಕು ಮಟ್ಟದ ಕಿರಿಯ ಹಾಗೂ ಹಿರಿಯ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.