QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ದಿನದ ವಿಶೇಷ ವಿಜ್ಞಾನ ಕಾರ್ಯಾಗಾರ

ಭಾರತ ಸರಕಾರ ಸಂಸ್ಕೃತಿ ಮಂತ್ರಾಲಯ, ವಿದ್ಯಾಭಾರತಿ ಸಂಸ್ಕೃತಿ ಶಿಕ್ಷಾ ಸಂಸ್ಥಾನ್, ಕುರುಕ್ಷೇತ್ರ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇದರ ಸಹಯೋಗದಲ್ಲಿ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಭಾರತೀಯ ಕೊಡುಗೆಗಳು ಎಂಬ ವಿಷಯದಲ್ಲಿ ’ಒಂದು ದಿನದ ವಿಶೇಷ ಕಾರ್ಯಾಗಾರ’ ದಿನಾಂಕ 10-9-2016 ನೇ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.

20160910_101110

20160910_102848

ಭಾರತ ಸರಕಾರ ರಕ್ಷಣ ಮಂತ್ರಾಲಯ ಪ್ರಾದೇಶಿಕ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಡಾ.ಜಯಪ್ರಕಾಶ್ ರಾವ್.ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ವೈಜ್ಞಾನಿಕ ತಂತ್ರಜ್ಞಾನ ನಾಗಲೋಟದಲ್ಲಿ ಓಡುತ್ತಿದೆ ಹಾಗಾಗಿ ವಿಜ್ಞಾನಿಗಳು ಕೂಡಾ ಅದೇ ವೇಗದಲ್ಲಿ ದಾಪುಗಾಲು ಇಡಬೇಕಾದುದು ಅನಿವಾರ್ಯ. ವಿಜ್ಞಾನ ವಿಭಾಗದಲ್ಲಿ ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ದೊರಕದಿರುವುದು ಬೇಸರದ ಸಂಗತಿ. ಆದುದರಿಂದ ದೇಶಕ್ಕಾಗಿ ಸಂಶೋಧನಾ ಮನೋಭಾವನೆಯನ್ನು ಇಂದಿನ ಮಕ್ಕಳು ರೂಢಿಕೊಳ್ಳಬೇಕು ಎಂದು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಇವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಭಾರತೀಯ ತತ್ವಜ್ಞಾನಿಗಳಾದ ಆರ್ಯಭಟ, ವರಾಹಮಿಹಿರರು ಭೂಮಿಗೆ ಸೂರ್ಯ ಸುತ್ತುತ್ತಾನೆ ಎಂದು ಸಾವಿರಾರು ವರ್ಷದ ಹಿಂದೆ ಹೇಳಿದ್ದಾರೆ. ಸಂಗೀತ, ಕಲೆ, ವಿಜ್ಞಾನ, ನಾಟ್ಯ, ಯೋಗ ಹೀಗೆ ಎಲ್ಲ ಪ್ರಕಾರಗಳನ್ನು ಜಗತ್ತಿಗೆ ಬೋಧಿಸಿದವರು ಭಾರತೀಯರು. 67 ಉಪಗ್ರಹಗಳನ್ನು ಒಂದೇ ರಾಕೆಟ್‌ನಲ್ಲಿ ಉಡಾಯಿಸುವ ಮೂಲಕ ಜಗತ್ತಿಗೆ ಸವಾಲು ಹಾಕುವ ಸಾಧನೆ ಭಾರತೀಯ ವಿಜ್ಞಾನಿಗಳಿಂದ ಆಗಿದೆ ಎಂದರು.

ಇಸ್ರೋದ ಹಿರಿಯ ನಿವೃತ್ತ ಅಧಿಕಾರಿ ಪಟ್ಟಿಕ್ಕಲ್ಲು ಶಂಕರ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು.

ಸರಸ್ವತಿ ವಿದ್ಯಾಲಯ ಕಡಬ ಇದರ ಸಂಚಾಲಕರಾದ ವೆಂಕಟರಮಣ ಭಟ್ ಪ್ರಾಸ್ತವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಷಣ್ಮುಖದೇವ ಪ್ರೌಢ ಶಾಲೆ, ಪೆರ್ಲಂಪಾಡಿ ಮುಖ್ಯಗುರು ಲೋಕಯ್ಯ.ಡಿ, ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ರಶ್ಮಿ ಶೆಟ್ಟಿ, ಶಾಲಾ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ರೂಪಲೇಖ, ಕೆ.ಎಂ.ಎಫ್ ನಿವೃತ್ತ ಅಧಿಕಾರಿ ಬಿ.ಎಸ್.ಹೆಗ್ಡೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಸಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಸ್ವಾಗತಿಸಿ, ಶಿಕ್ಷಕಿ ಸಾಯಿಗೀತಾ ವಂದಿಸಿ, ವಿಜ್ಞಾನ ಶಿಕ್ಷಕಿಯರಾದ ಶಾರದಾ ಶೆಟ್ಟಿ ಹಾಗೂ ಸುಗೀತಾ ರೈ ಸಹಕರಿಸಿದರು. ಶಿಕ್ಷಕ ಗಣೇಶ್ ಕುಲಾಲ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.