QR Code Business Card

ಸಮಾಜವನ್ನು ಸರಿದಾರಿಗೆ ತರಲು ಸಾಹಿತ್ಯ ಅಗತ್ಯ  – ಡಾ.ಪ್ರಭಾಕರ್ ಭಟ್ ಕಲ್ಲಡ್ಕ

ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಿ ಅದಕ್ಕೆ ಬರೆಹದ ಲೇಪನವನ್ನು ನೀಡಿ ಹೆಚ್ಚು ಓದುವ ಮೂಲಕ ಸೃಜನಾತ್ಮಕತೆಯನ್ನು ಬೆಳೆಸಬಹುದು. ಸೃಜನಾತ್ಮಕ ಬರೆವಣಿಗೆ ಎಂದರೆ ಏನು ಎಂಬುದು ಉತ್ತರವಿಲ್ಲದ ಪ್ರಶ್ನೆ. ಚೌಕಟ್ಟಿನ ಹೊರಗೆ ಬಂದು ಯೋಚನೆಮಾಡಿದಾಗ ಅಲ್ಲಿ ಸೃಜನಾತ್ಮಕತೆ ಚಿಗುರೊಡೆಯುತ್ತದೆ ಎಂದು ಹೇಳುತ್ತಾ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿ ಶ್ರೀವತ್ಸ ಸಿ.ಎಸ್. ಇವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸುವಿಚಾರ ಸಾಹಿತ್ಯ ಸಂಘದ ಆಶ್ರಯದಲ್ಲಿ ದಿನಾಂಕ 10-09-2016 ರ ಶನಿವಾರದಂದು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಬರೆವಣಿಗೆಯಲ್ಲಿ ಸೃಜನಶೀಲತೆ ಎಂಬ ಕಾರ್ಯಾಗಾರದಲ್ಲಿ ಮಾತನಾಡಿದರು.

20160910_114510

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಇವರು ಉಪಸ್ಥಿತರಿದ್ದು ಸಮಾಜವನ್ನು ಸರಿದಾರಿಗೆ ತರಲು ಸಾಹಿತ್ಯ ಅಗತ್ಯ Read between the lines ಎಂಬ ಕಿವಿಮಾತನ್ನು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಹಾಗೂ ಸರಸ್ವತಿ ವಿದ್ಯಾಲಯ ಕಡಬ ಇದರ ಸಂಚಾಲಕರಾದ ವೆಂಕಟರಮಣ ಭಟ್ ಇವರು ಉಪಸ್ಥಿತರಿದ್ದರು. ಕುಮಾರಿ ವಂದನಾ ಗೌರಿ ಸ್ವಾಗತಿಸಿ, ಸಾಹಿತ್ಯ ಸಂಘದ ಅಧ್ಯಕ್ಷೆ ಪಂಚಮಿ ಸರ್ಪಂಗಳ ವಂದಿಸಿದರು. ಕು.ಮೇಧ ಅಡಿಗ ಪ್ರಾರ್ಥಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲಾ ಶಿಕ್ಷಕರುಗಳಾದ ಶ್ರೀಮತಿ ಪುಷ್ಪಲತ.ಬಿ.ಕೆ, ಶ್ರೀಮತಿ ಮಧುರಾ ಜೋಶಿ, ಶ್ರೀಮತಿ ಯಶೋಧ ಹಾಗೂ ಶ್ರೀ ಮಹೇಶ್ ಇವರು ಸಹಕರಿಸಿದರು.