ದಿನಾಂಕ 20-9-2016 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನ ಮಂಗಳ ಈಜುಕೊಳದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ 2 ಚಿನ್ನ, 7 ಬೆಳ್ಳಿ, 13 ಕಂಚಿನ ಪದಕ ಗಳಿಸಿ 4 ವಿದ್ಯಾರ್ಥಿಗಳು ಮುಂದೆ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಈಜು ಸ್ಪರ್ಧೆಗೆ ಅಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದ ಬಾಲಕರಲ್ಲಿ ನೂತನ್.ಬಿ 4×100 ದ್ವಿತೀಯ, 100 ಮೀ ಬಟರ್ ಪ್ಲೈನಲ್ಲಿ ತೃತೀಯ, 4×100 ಮೀ ಮಿಡ್ಲ್ ರಿಲೇಯಲ್ಲಿ ದ್ವಿತೀಯ, ಧ್ಯಾನದೀಪ್ 4×100 ಮೀ ಫ್ರೀಸ್ಟೈಲ್ ರಿಲೇ ದ್ವಿತೀಯ, 4×100 ಮೀ ಮಿಡ್ಲ್ ರಿಲೇಯಲ್ಲಿ ದ್ವಿತೀಯ, ಪರ್ಜನ್ಯ ಶರ್ಮಾ 100 ಮೀ ಫ್ರೀ ಸ್ಟೈಲ್ ತೃತೀಯ, 50 ಮೀ ಬಟರ್ ಪ್ಲೈನಲ್ಲಿ ದ್ವಿತೀಯ, ಸಾತ್ವಿಕ್ ಆಚಾರ್ಯ 50 ಮೀ ಬಟರ್ ಪ್ಲೈನಲ್ಲಿ ತೃತೀಯ, 4×100 ಮೀ ಫ್ರೀ ಸ್ಟೈಲ್ ರಿಲೇ ದ್ವಿತೀಯ, 4×100 ಮೀ ಮಿಡ್ಲ್ ರಿಲೇಯಲ್ಲಿ ದ್ವಿತೀಯ, ಆದಿತ್ಯ ಶೆಟ್ಟಿ 50 ಮೀ ಫ್ರೀ ಸ್ಟೈಲ್ ನಲ್ಲಿ ತೃತೀಯ, 200 ಮಿ ಬಟರ್ ಫ್ಲೈ ನಲ್ಲಿ ತೃತೀಯ, 4×100 ಮೀ ಫ್ರೀಸ್ಟೈಲ್ ರಿಲೇ ದ್ವಿತೀಯ, 4×100 ಮೀ ಮಿಡ್ಲ್ ರಿಲೇಯಲ್ಲಿ ದ್ವಿತೀಯ ಸ್ಥಾನ.
ಪ್ರಾಥಮಿಕ ವಿಭಾಗದ ಬಾಲಕಿಯರಲ್ಲಿ ಶ್ರೇಯಾ ಪಿ.ಯು ಇವಳು 100 ಮೀ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ, 200 ಫ್ರೀ ಸ್ಟೈಲ್ ನಲ್ಲಿ ತೃತೀಯ ಸ್ಥಾನ. ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ರತನ್ ಬಿ 100 ಮೀ ಬಟರ್ ಫ್ಲೈ ನಲ್ಲಿ ಪ್ರಥಮ, 50 ಮೀ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ, 100 ಮೀ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ, ಅಮೃತ್ ಸಿ 100 ಮೀ ಫ್ರೀ ಸ್ಟೈಲ್ ನಲ್ಲಿ ಪ್ರಥಮ, 200 ಮೀ ಬಟರ್ ಫ್ಲೈ ನಲ್ಲಿ ದ್ವಿತೀಯ, ೮೦೦ ಮೀ ಫ್ರೀ ಸ್ಟೈಲ್ ನಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇದರಲ್ಲಿ ರತನ್ ಬಿ, ಅಮೃತ್ ಸಿ, ಶ್ರೇಯಾ ಪಿ.ಯು, ಪರ್ಜನ್ಯ ಶರ್ಮಾ ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.