QR Code Business Card

ವಿದ್ಯಾರ್ಥಿಗಳು ರಾಜ್ಯಮಟ್ಟದ ವಿಜ್ಞಾನ ವಸ್ತುಪದರ್ಶನಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ಎನ್.ಸಿ.ಇ.ಆರ್.ಟಿ ನವದೆಹಲಿ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ವಿಜ್ಞಾನ ವಸ್ತುಪ್ರದರ್ಶನವು ರಾಮಕೃಷ್ಣ ಶಾಲೆ, ಮಂಗಳೂರಿನಲ್ಲಿ ದಿನಾಂಕ 9-11-2016 ರಂದು ನಡೆಯಿತು.

wp_20161111_10_15_46_pro

ನಮ್ಮ ಶಾಲೆಯ 5 ತಂಡಗಳು 5 ವಿಭಾಗಗಳಲ್ಲಿ ಸ್ಪರ್ಧಿಸಿದ್ದು, ಇದರಲ್ಲಿ 10 ನೇ ತರಗತಿಯ ಸ್ವಸ್ತಿಕ್ ಪದ್ಮ(ಶ್ರೀರಾಮ ಭಟ್ ಮತ್ತು ಮಲ್ಲಿಕಾ ಭಟ್, ಮುರ್ಗಜೆ) ಮತ್ತು ಶಮಂತ ರೈ(ಹರೀಶ್ ರೈ ಮತ್ತು ಕವಿತಾ.ಎಚ್.ರೈ, ಮುಡಿಪಿನಡ್ಕ)ಕೈಗಾರಿಕಾ ವಿಷಯದಲ್ಲಿ I-Plack ವಿನೂತನ ಸಂಶೋಧನೆಗೆ ಪ್ರಥಮ ಸ್ಥಾನ ಮತ್ತು 9 ನೇ ತರಗತಿಯ ವಿಕ್ರಮ ಆಳ್ವ(ಕೃಷ್ಣಪ್ರಸಾದ್ ಆಳ್ವ ಮತ್ತು ವಿದ್ಯಾಪ್ರಸಾದ್ ಆಳ್ವ, ಚೆಲ್ಯಡ್ಕ) ಮತ್ತು ಲೋಕೆಂದರ್ ಸಿಂಗ್(ರತನ್ ಸಿಂಗ್ ರಾಥೋಡ್ ಮತ್ತು ಸರೋಜಾ, ಪುತ್ತೂರು)-ಸುಸ್ಥಿರ ಪರಿಸರಕ್ಕಾಗಿ ನವೀಕರಿಸಬಹುದಾದ ಸಂಪನ್ಮೂಲಗಳಲ್ಲಿ ನಾವೀನ್ಯತೆ ವಿಷಯದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಬಳ್ಳಾರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಹಾಗೆಯೇ ಆಕಾಶ್ ಮತ್ತು ವಿನೂತನ್(8ನೇ ತರಗತಿ) ಇವರು ಸಾರಿಗೆ ಮತ್ತು ಸಂಪರ್ಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು, ರೀವನ್ ಮತ್ತು ರೋಶನ್ -ಸುಸ್ಥಿರ ಪರಿಸರಕ್ಕಾಗಿ ನವೀಕರಿಸಬಹುದಾದ ಸಂಪನ್ಮೂಲಗಳಲ್ಲಿ ನಾವೀನ್ಯತೆ ವಿಷಯದಲ್ಲಿ ಹಾಗೂ ಆಹಾರ ಮತ್ತು ಭದ್ರತೆ ವಿಷಯದಲ್ಲಿ ನಿಶ್ಚಿತ್ ರೈ ಮತ್ತು ಚರಣ ಭಾಗವಹಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.