QR Code Business Card

ವಿಜ್ಞಾನ ಪ್ರದರ್ಶನಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

24 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಪರಿಷತ್ತು ಇವರ ವತಿಯಿಂದ ದ.ಕ.ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್.ಡಿ.ಎಮ್.ಉಜಿರೆ ಇವರ ಜಂಟಿ ಆಶ್ರಯದಲ್ಲಿ ನಡೆದ ವಿಜ್ಞಾನ ಸಮಾವೇಶದಲ್ಲಿ ಪ್ರಾಥಮಿಕ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಕು| ಕನ್ಯಾ ಶೆಟ್ಟಿ(ಸಚಿನ್ ಶೆಟ್ಟಿ ಮತ್ತು ರಶ್ಮಿ ಶೆಟ್ಟಿ ದಂಪತಿ ಪುತ್ರಿ), ಕು| ಖುಷಿ ಪುತ್ತೂರಾಯ ( ಡಾ| ಸುರೇಶ್ ಪುತ್ತೂರಾಯ ಮತ್ತು ಡಾ| ಆಶಾಜ್ಯೋತಿ ದಂಪತಿ ಪುತ್ರಿ), ರಾಕೇಶ್ ಕೃಷ್ಣ ( ರವಿಶಂಕರ್ ಮತ್ತು ಡಾ| ದುರ್ಗಾರತ್ನ ದಂಪತಿ ಪುತ್ರ) ಕಾರ್ತಿಕ್ ( ರಾಜೇಶ್ ಮತ್ತು ರೇಖಾ ದಂಪತಿ ಪುತ್ರ), ಸುಶ್ರುತ್ ವಸಿಷ್ಠ ( ಡಾ| ಭಾಸ್ಕರ್ ಮತ್ತು ಡಾ| ಸೌಮ್ಯಾ ದಂಪತಿ ಪುತ್ರ ) ಇವರ ತಂಡ ಹಾಗೂ ಪ್ರೌಢ ಶಾಲಾ  ವಿಭಾಗದಲಿ ಸ್ವಸ್ತಿಕ್ ಪದ್ಮ ( ಶ್ರೀ ರಾಮ್ ಭಟ್ ಮತ್ತು ಮಲ್ಲಿಕಾ ಭಟ್ ಮುರ್ಗಜೆ ದಂಪತಿ ಪುತ್ರ), ಶಮಂತ್ ರೈ ( ಹರೀಶ್ ರೈ ಮತ್ತು ಕವಿತಾ. ಎಚ್.ರೈ ದಂಪತಿ ಪುತ್ರ ), ಧ್ಯಾನ್. ಟಿ.ಡಿ.( ದಿನೇಶ್ ಮತ್ತು ಶ್ರೀಲತಾ ದಂಪತಿ ಪುತ್ರ), ಗೌರೀಶ ಕಜಂಪಾಡಿ (ಬಾಲರಾಜ್.ಕೆ ಮತ್ತು ರಾಜನಂದಿನಿ ದಂಪತಿ ಪುತ್ರ) ಸ್ವಸ್ತಿಕ್ ಕಾರಂತ್ (ಕೃಷ್ಣ ಕಾರಂತ್ ಮತ್ತು ಸಂಧ್ಯಾ ಕಾರಂತ್ ದಂಪತಿ ಪುತ್ರ) ಇವರ ತಂಡ ಪ್ರಸ್ತುತಪಡಿಸಿದ ವಿಜ್ಞಾನ ಪ್ರದರ್ಶನಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿಯರಾದ ಸಿಂಧು.ವಿ.ಜಿ., ರೇಖಾ, ಸಂಧ್ಯಾ, ರಶ್ಮಿ ಶೆಟ್ಟಿ, ಶಾರದಾ ಶೆಟ್ಟಿ ಮತ್ತು ಜ್ಯೋತಿ ದಿವಾಕರ್ ಇವರು ಮಾರ್ಗದರ್ಶನ ನೀಡಿರುತ್ತಾರೆ.

img-20161111-wa0063