ಜನರೇಶನ್ ನೆಕ್ಸ್ಟ್ ಎಜ್ಯುಕೇಶನ್ ಎಂಡ್ ಲರ್ನಿಂಗ್ ಸಿಸ್ಟಮ್ ಇವರು ಉಡುಪಿ ಟೌನ್ ಹಾಲ್ನಲ್ಲಿ ನಡೆಸಿದ ನ್ಯಾಷನಲ್ ಲೆವೆಲ್ ವೇದಗಣಿತ ಲೆವೆಲ್-1 ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿರುತ್ತಾರೆ. ವಿಜೇತರ ವಿವರ: ದೈವಿಕ್ ರಾಜೇಶ್, 6ನೇ ತರಗತಿ -ಪ್ರಥಮ ಸ್ಥಾನ[ರಾಜೇಶ್ ಜಗನ್ನಾಥ ಮತ್ತು ಶ್ವೇತಾ ರಾಜೇಶ್ರವರ ಪುತ್ರ] ಅವ್ಯಯ ಶರ್ಮ-7ನೇ ತರಗತಿ-ದ್ವಿತೀಯ ಸ್ಥಾನ[ವಿನಾಯಕ ರಾಮ.ಜಿ.ಪಿ ಮತ್ತು ಪ್ರಸನ್ನರವರ ಪುತ್ರ], ಸುಮೇದ್ ನಾವುಡ -7ನೇ ತರಗತಿ -ತೃತೀಯ ಸ್ಥಾನ[ಸುಬ್ರಹ್ಮಣ್ಯ ನಾವುಡ ಮತ್ತು ಸೌಮ್ಯರವರ ಪುತ್ರ] ಪಡೆದಿರುತ್ತಾರೆ.