ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇದರ 2016-17 ನೇ ಸಾಲಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವೆಂಕಟೇಶ್ವರ ಅಮೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಒಳ್ಳೆಯ ಆರೋಗ್ಯ, ಸಂಸ್ಕೃತಿ, ಸಂಸ್ಕಾರವನ್ನು ಪಡೆಯಲು ಆರೋಗ್ಯವೇ ಮುಖ್ಯ ಕ್ರೀಡೆ ಗುಣ, ಆತ್ಮ ವಿಶ್ವಾಸ, ಬದುಕಿಗೆ ಸ್ಪೂರ್ತಿ ನೀಡಬಲ್ಲದ್ದು ಮತ್ತು ಸಾಧನೆಯ ಉತ್ತುಂಗಕ್ಕೆ ಕ್ರೀಡೆಯ ಒಂದು ಪ್ರಮುಖ ಹಂತ ಎಂದರು. ಪುತ್ತೂರು ನಗರ ಠಾಣೆಯ ವೃತ್ತ ನಿರೀಕ್ಷಕರಾದ ಮಹೇಶ್ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಸಮಾಜದಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ ಮಾಡಲು ಕ್ರೀಡೆ ಸಹಕಾರಿ ಶಿಕ್ಷಕರು ಮಕ್ಕಳಲ್ಲಿ ಭಾವನಾತ್ಮಕವಾಗಿರುವುದನ್ನು ಮಕ್ಕಳ ಶಿಸ್ತು ತೋರಿಸುತ್ತದೆ. ದೇಶಕ್ಕೆ ಹೆಮ್ಮೆ ತರುವಂತಹ ಒಲಂಪಿಕ್ಸ್ ಆಟದಷ್ಟೇ ಶಾಲಾ ಕ್ರೀಡೆಗಳು ಕೂಡ ಪ್ರಮುಖವಾದುದು ಎಂದರು.
ವಿಟ್ಲ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರಾದ ವಿದ್ಯಾಶಂಕರ್ ಮುಖ್ಯ ಅತಿಥಿಯಾಗಿ ಆಗಮಿಸಿ ಮನುಷ್ಯ ನಿರಂತರ ಅಭ್ಯಾಸದಿಂದ ಉತ್ತಮ ಕ್ರೀಡಾಪಟು ಆಗಬಹುದು. ಒಬ್ಬ ಕ್ರೀಡಾಪಟುವಿಗೆ ಅಭ್ಯಾಸವೇ ಮುಖ್ಯ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಣನೀಯವಾದ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಕೃಷ್ಣ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಮೋನಪ್ಪ ಗೌಡ ಪಟ್ಟೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ತಿಂಗಳಾಡಿ ಇಲ್ಲಿನ ದೈಹಿಕ ಶಿಕ್ಷಕಿ ನಯನಾ.ವಿ.ರೈ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಮುರಳೀಧರ್.ಕೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಡಾ.ಮುರಳೀಕೃಷ್ಣ ರೈ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರುಗಳು ಮತ್ತು ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಪೂರ್ವ ಅಧ್ಯಕ್ಷರಾದ ರವಿಮುಂಗ್ಲಿಮನೆ, ವಿಶ್ವನಾಥ ರೈ ಕುದ್ಕಾಡಿ, ಕೆ.ಜಿ.ವಿಭಾಗದ ಮುಖ್ಯಸ್ಥೆ ಮಮತಾ ಮತ್ತು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮ ನಾಕ್ ವಂದಿಸಿ, ಶಿಕ್ಷಕಿರಾದ ಅನುರಾಧ, ರೇಶ್ಮಾ, ಶಾಂತಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಮತ್ತು ಯೋಗ ವ್ಯಾಯಾಮ ನಡೆಯಿತು.