QR Code Business Card

5, 6 ನೇ ತರಗತಿಯ ’ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇದರ 2016-17 ನೇ ಸಾಲಿನ 5, 6 ನೇ ತರಗತಿಯ ’ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಸ್ವಾಮಿ ಕಲಾಮಂದಿರದ ಸಭಾಂಗಣದಲ್ಲಿ 7 ದಶಂಬರ 2016 ರಂದು ನಡೆಯಿತು.

dsc_1205

dsc_1202

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಶೇಖರ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹ ಕೊಡುವ ಅವಕಾಶವೇ ಪ್ರತಿಭಾ ಪುರಸ್ಕಾರ. ಗಡಿಯಾರ ಸಮಯದ ಮಹತ್ವವನ್ನು ವಿವರಿಸುತ್ತದೆ. ಪ್ರತಿ ಕ್ಷಣದ ಮಹತ್ವ ಎನ್ನುವ ನಿಟ್ಟಿನಲ್ಲಿ ಈ ವರ್ಷ ಗಡಿಯಾರವನ್ನು ಪ್ರಶಸ್ತಿಯನ್ನಾಗಿ ನೀಡುತ್ತೇವೆ ಎಂದು ಹೇಳಿದರು.

ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ದೀಪಾ ನಾಯಕ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೋಲಿನ ಹಿಂದೆ ಗೆಲುವು ಇರುತ್ತದೆ ಆದುದರಿಂದ ಎಲ್ಲರೂ ಆ ಗೆಲುವನ್ನು ಪಡೆಯುವಂತಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ಪ್ರಸನ್ನ ಕುಮಾರ್, ಶಿಕ್ಷಕ ರಕ್ಷಕ ಸಂಘದ ಸದಸ್ಯರುಗಳಾದ ಜಯಕುಮಾರ್ ಜೈನ್, ರಘುರಾಮ್.ಯು, ಪ್ರಸಾದ್ ರೈ, ಅನಿಲ್ ಕುಮಾರ್ ತೆಂಕಿಲ, ಗೀತಾ.ಡಿ.ರೈ, ಜಯರಾಮ ಗೌಡ.ಎಚ್, ಸವಿತಾ ಅಡಿಗ, ಧನ್ಯಕುಮಾರಿ, ಪ್ರಸಾದ್ ರೈ ಮತ್ತು ರಾಧಾಕೃಷ್ಣ ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸಿದರು. ವಿದ್ಯಾರ್ಥಿನಿ ಹಿತ ಕಜೆ ಮತ್ತು ಬಳಗ ಪ್ರಾರ್ಥಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮ ನಾಯ್ಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕಿಯರಾದ ರೇಷ್ಮಾ ಮತ್ತು ಶ್ರುತಿ ಕಾರ್ಯಕ್ರಮ ನಿರ್ವಹಿಸಿದರು.