ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ 7ನೇ ಮತ್ತು 8ನೇ ತರಗತಿಯ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 2016-17 ದಿನಾಂಕ 8-12-2016 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ವಿವೇಕಾನಂದ ಆಂಗ್ಲ ಮಾಧ್ಯಮದ ಸದಸ್ಯರಾದ ಡಾ. ಸುರೇಶ್ ಪುತ್ತೂರಾಯ ಮಾತಾಡಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುವುದು ಮಕ್ಕಳ ಮತ್ತು ಪಾಲಕರ ಕರ್ತವ್ಯವಾಗಬೇಕು. ಮಕ್ಕಳಿಗಾಗಿ ಮನೆಯಲ್ಲಿ ಉತ್ತಮ ಕಲಿಕೆಗೆ ಶಾಂತವಾದ, ಬೆಳಕು ಮತ್ತು ಗಾಳಿ ನಡೆದಾಡುವ ಕೊಠಡಿ ಮಕ್ಕಳಿಗೆ ಒದಗಿಸುವುದು ಪೋಷಕರ ಕರ್ತವ್ಯ ಎಂದರು.
ವಿವೇಕಾನಂದ ಆಂಗ್ಲ ಮಾಧ್ಯಮದ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಡಾ. ಶಶಿಧರ್ ಕಜೆ ಮುಖ್ಯ ಅತಿಥಿಯಾಗಿ ಮಾತನಾಡಿ ಇಂದಿನ ಮಕ್ಕಳು ಸುಸಂಸ್ಕೃತರಾಗಿ ಬೆಳೆದರೆ ಮುಂದಿನ ಸಮಾಜ ಆರೋಗ್ಯಪೂರ್ಣ ಪ್ರಜೆಗಳನ್ನು ಪಡೆಯುತ್ತದೆ. ಇಲ್ಲಿ ಮಕ್ಕಳಲ್ಲಿ ಬೌದ್ಧಿಕ, ಮಾನಸಿಕ ಮತ್ತು ಸನಾತನ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಶ್ಲಾಘನೀಯ ಎಂದರು.
ಶಿಕ್ಷಕ ರಕ್ಷಕ ಸಂಘದ ಪೂರ್ವಾಧ್ಯಕ್ಷರಾದ ರವಿ ಮುಂಗ್ಲಿಮನೆ ಮಾತನಾಡಿ ಸ್ಪರ್ಧೆ ಇರುವುದು ಭಾಗವಹಿಸುವುದಕ್ಕೆ ಮತು “ನೋ” ಎಂಬ ಪದವು ಜೀವನದಲ್ಲಿ ಸುಳಿಯಲೇಬಾರದು ಎಂದು ನುಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯಗುರು ಸತೀಶ್ ರೈ ಉಪಸ್ಥಿತರಿದ್ದರು.
ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳಾದ ಸ್ನೇಹ ಲತಾ, ಗಾಯತ್ರಿ, ಸಪ್ನಾ, ಶಿಲ್ಪಾ.ಪಿ.ಎಸ್, ಲತಾ.ಕೆ, ಸುಪರ್ಣ, ಆಶಾ.ಎಸ್.ಎನ್, ಶಾಮ್ ಸುಂದರ್, ಜಲಜಾಕ್ಷಿ ಮುಂತಾದವರು ವಿದ್ಯಾರ್ಥಿ/ನಿಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಾಥಮಿಕ ವಿಭಾಗ ಮುಖ್ಯ ಗುರು ರಾಮ ನಾಯ್ಕ್ ಸ್ವಾಗತಿಸಿ, ಶಿಕ್ಷಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.