ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ 1 ನೇ ಮತ್ತು 2 ನೇ ತರಗತಿ ಮಕ್ಕಳ ಪ್ರತಿಭಾ ಪುರಸ್ಕಾರ ಎಕ್ಸಲೆನ್ಸ್ ಅವಾರ್ಡ್ 2016-17 ಸ್ವಾಮಿ ಕಲಾ ಮಂದಿರದಲ್ಲಿ ಡಿಸೆಂಬರ್ 10 ರಂದು ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮದ ಆಡಳಿತ ಮಂಡಳಿ ಅಧ್ಯಕ್ಷರಾದ ವೆಂಕಟೇಶ್ವರ ಅಮೈ ಸಭಾಧ್ಯಕ್ಷತೆ ವಹಿಸಿ ಮಾತಾಡಿ ಮಕ್ಕಳು ಈ ದೇಶದ ಆಸ್ತಿ. ಈ ಆಸ್ತಿಗಳನ್ನು ಬೆಳೆಸುವ ಮತ್ತು ಅವರ ಭವಿಷ್ಯ ನಮ್ಮ ಕೈಯಲ್ಲಿದೆ, ಶೀಲವಂತ, ಪರಾಕ್ರಮಿ ಸದ್ಗುಣಗಳನ್ನು ಹೊಂದಿರುವ ಮಕ್ಕಳ ನಿರ್ಮಾಣ ನಮ್ಮ ಕರ್ತವ್ಯವಾಗಬೇಕು ಎಂದರು.
ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಡಾ.ಅಮೃತಾ ಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತಾಡಿ ಶಾಲೆಯಲ್ಲಿ ವರ್ಷದುದ್ದಕ್ಕೂನಡೆದ ಎಲ್ಲಾ ಚಟುವಟಿಕೆಗಳನ್ನು ಗುರುತಿಸುವ ಕಾರ್ಯಕ್ರಮ ಈ ಪ್ರತಿಭಾ ಪುರಸ್ಕಾರವಾಗಿದೆ. ಉತ್ಸಾಹದಿಂದ ಪಾಲ್ಗೊಳ್ಳುವ ಮಕ್ಕಳ ದೈಹಿಕ, ಮಾನಸಿಕತೆಯ ಧೃಡತೆಗೆ ಪುರಸ್ಕಾರವು ಪೂರಕ ಎಂದರು.
ಕೆ.ಜಿ ವಿಭಾಗದ ಮುಖ್ಯಸ್ಥೆ ಮಮತ ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳಾದ ಶಂಕರ ಭಟ್.ವಿ.ಎಸ್, ರಾಧಾಕೃಷ್ಣ, ದಯಾನಂದ, ಉದಯ ರೈ, ಶ್ವೇತಾ, ಜಯಮಾಲಾ, ರಾಧಿಕಾ, ಶಿವಪ್ರಸಾದ್, ವಾಣಿಶ್ರೀ ಮತ್ತು ಜಯಶ್ರೀ ಉಪಸ್ಥಿತರಿದ್ದು ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮನಾಕ್ ಸ್ವಾಗತಿಸಿ, ಶಿಕ್ಷಕಿ ರೇಶ್ಮಾ ಪ್ರಾರ್ಥಿಸಿ, ಶಿಕ್ಷಕಿ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು.