QR Code Business Card

ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ದಿನಾಂಕ 27-12-2016 ರಂದು ಶ್ರೀಲಂಕಾದ ವಾರಿಯಪೊಲದಲ್ಲಿ ನಡೆದ ಭಾರತ-ಶ್ರೀಲಂಕಾ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಸದ್ರಿ ಸ್ಪರ್ಧೆಯನ್ನು ಅಂತರಾಷ್ಟ್ರೀಯ ಯೂತ್‌ಯೋಗ ಫೆಡರೇಶನ್ ಹಾಗೂ ಶ್ರೀಲಂಕಾ ಯೂತ್‌ಯೋಗ ಫೆಡರೇಶನ್ ಅವರ ಸಹಯೋಗದೊಂದಿಗೆ ಏರ್ಪಡಿಸಿದ್ದರು. ವಿದ್ಯಾರ್ಥಿಗಳ ವಿವರ – ಅಪೇಕ್ಷಾ.ಕೆ, 10ನೇ ತರಗತಿ-ಪ್ರಥಮ, ನಂದನ, 3ನೇ ತರಗತಿ-ಪ್ರಥಮ, ನಯನ, 9ನೇ ತರಗತಿ-ಪ್ರಥಮ, ನಮನ, 6ನೇ ತರಗತಿ-ಪ್ರಥಮ, ಶ್ರವಣ್ ಕುಮಾರ್.ಡಿ, 8ನೇ ತರಗತಿ, -ಪ್ರಥಮ, ನಿಶ್ಚಲ್.ಕೆ.ಜೆ, 8ನೇ ತರಗತಿ-ಪ್ರಥಮ, ಚೈತ್ರೇಶ್, 7ನೇ ತರಗತಿ-ದ್ವಿತೀಯ, ಮಹಿಮಾ, 8ನೇ ತರಗತಿ-ದ್ವಿತೀಯ, ಭವಿಷ್.ಎಸ್, 6ನೇ ತರಗತಿ-ತೃತೀಯ ಸ್ಥಾನ ಪಡೆದಿರುತ್ತಾರೆ. ಇವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ನಿರ್ದೇಶಕರಾದ ಜಯರಾಮ.ಬಿ ಇವರು ತರಬೇತುಗೊಳಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

vems-yoga