QR Code Business Card

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತಾಲೂಕಿಗೆ ಪ್ರಥಮ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶ್ವರಂ ಬೆಂಗಳೂರು ಇವರು 2016-17 ನೇ ಸಾಲಿನಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಆಚಾರ್ ೫೦೦ ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ.

Shreyas
ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಒಟ್ಟು 13 ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಅವರಲ್ಲಿ ಪೂಜಾ.ಎಸ್(9ನೇ ತರಗತಿ)-484 ಅಂಕ, ಸುಹಾನ್ ರೈ.ಎನ್(9ನೇ ತರಗತಿ)- 474ಅಂಕ, ದೀಪಶ್ರೀ(9ನೇ ತರಗತಿ)-434 ಅಂಕ, ಶೈಲೇಶ್(9ನೇ ತರಗತಿ)-435 ಅಂಕ, ಲಹರಿ.ಕೆ.ರೈ(9ನೇ ತರಗತಿ)-432 ಅಂಕ, ಶಿವಾನಿ.ಸಿ.ಪಿ(9ನೇ ತರಗತಿ)-425 ಅಂಕ ಪಡೆದಿರುತ್ತಾರೆ ಹಾಗೂ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆ 100% ಫಲಿತಾಂಶ ದಾಖಲಿಸಿದೆ.

drawing1
ಲೋವರ್ ಗ್ರೇಡ್‌ನಲ್ಲಿ ಒಟ್ಟು ೩೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಅವರಲ್ಲಿ ದ್ವಿತಿ.ಡಿ.ಪಿ (8ನೇ ತರಗತಿ)-450 ಅಂಕ, ಅನುಶ್ರೀ (8ನೇ ತರಗತಿ)-447 ಅಂಕ, ಅನಘಾ ರಾವ್-444 ಅಂಕ, ಆದಿತ್ಯಾ ದಿನೇಶ್.ಕೆ(8ನೇ ತರಗತಿ)-423 ಅಂಕ, ಪ್ರಜ್ಞಾ.ಎಸ್(8ನೇ ತರಗತಿ)-424 ಅಂಕ ಪಡೆದಿರುತ್ತಾರೆ ಹಾಗೂ 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 12 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
drawing2
ಈ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಮಹೇಶ್ ಹಿರೇಮಣಿ, ರಶ್ಮಿ ಶೆಟ್ಟಿ ಹಾಗೂ ಪ್ರತಿಮಾ ಇವರು ತರಬೇತಿ ನೀಡಿರುತ್ತಾರೆ ಎಂದು ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.