ನಮ್ಮ ಶಾಲೆಗೆ ಅಮೇರಿಕದ ಸಂಶೋಧನಾತ್ಮಕ ಪರಿವೀಕ್ಷಕರ ತಂಡವು ಭೇಟಿ ನೀಡಿದ್ದು, ನಮ್ಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸ್ವಸ್ಥಿಕ್ ಪದ್ಮ ಸಂಶೋಧಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಲ್ಪಟ್ಟ “PLAMA” ಯೋಜನಾ ವಸ್ತುವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು, ISEF ಅಂತರಾಷ್ಟ್ರೀಯ ವೈಜ್ಞಾನಿಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈತನು IRIS ರಾಷ್ಟ್ರೀಯ ಮಟ್ಟದಲ್ಲಿ ಗ್ರಾಂಡ್ ಗೋಲ್ಡ್ ಅವಾರ್ಡ್ ಪಡೆದು ಪ್ರಶಂಸೆಗೆ ಪಾತ್ರನಾಗಿರುತ್ತಾನೆ.
ಆ ಪ್ರಯುಕ್ತ ಪ್ರಾಥಮಿಕ ಹಂತದಲ್ಲಿ ಸಂಶೋಧನೆಯಲ್ಲಿ ಮಾಡಿದ ವರದಿಯನ್ನು ಚಿತ್ರೀಕರಿಸಿ ಮಾಹಿತಿ ಸಂಗ್ರಹಿಸುವ ಸಲುವಾಗಿ ಲಾರಾ ಮತ್ತು ಅವರ 5 ಮಂದಿಯ ಪರಿವೀಕ್ಷಕರ ತಂಡವು ಶಾಲೆಗೆ ಮತ್ತು ವಿದ್ಯಾರ್ಥಿಯ ಮನೆಗೆ ಭೇಟಿಕೊಟ್ಟು ಚಿತ್ರೀಕರಣವನ್ನು ಮಾಡಿ, ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಸಂದರ್ಶನವನ್ನು ಮಾಡಿ ದಾಖಲೀಕರಿಸಿಕೊಂಡಿದೆ. ಈ ಸಂದರ್ಭದಲ್ಲಿ ಲಾರಾ ಮತ್ತು ಅವರ ತಂಡವನ್ನು ಗೌರವಿಸಲಾಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸಂಚಾಲಕರು ಉಪಸ್ಥಿತರಿದ್ದರು. ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕ್ರಟಣೆಯಲ್ಲಿ ತಿಳಿಸಿರುತ್ತಾರೆ.