QR Code Business Card

ವಿಶ್ವಯೋಗ ದಿನಾಚರಣೆ

ದಿನಾಂಕ 21-6-2017 ನೇ ಬುಧವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಮನುಷ್ಯನಾಗಿ ಬದುಕಲು ಯೋಗ ಬೇಕು. ಮನುಷ್ಯನಲ್ಲಿರುವ ಮೃಗೀಯ ಭಾವನೆಗಳು ದೂರವಾಗಬೇಕಾದರೆ ಯೋಗಬೇಕು. ಮನಸ್ಸು ಮತ್ತು ಶರೀರದ ಸಂಯೋಗವೇ ಯೋಗ. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಪತಂಜಲಿ ಮುನಿಗಳು ಅಷ್ಟಾಂಗಯೋಗವನ್ನು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ವೃದ್ಧಿಸಬೇಕಾದರೆ ಯೋಗ ಅತ್ಯಗತ್ಯ. ವರ್ಷದ ದೀರ್ಘ ದಿನವಾದ ಜೂನ್ 21 ರಂದು ಆಚರಿಸುವ ಯೋಗ ಎಲ್ಲರ ಜೀವನದಲ್ಲಿ ಉತ್ತಮ ಸುಯೋಗವನ್ನು ತರಲಿ ಎಂದು ಮೈತ್ರೇಯಿ ಗುರುಕುಲದ ಆಚಾರ್ಯರಾದ ಉಮೇಶ ಹೆಗಡೆಯವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನುಡಿದರು.

VEMS yoga (2)

VEMS yoga (1)

VEMS yoga (3)

VEMS yoga

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ್ವರ ಅಮೈ ಮಾತನಾಡಿ, ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿದಾಗ ಮನುಷ್ಯನ ಅಂತಸ್ಸತ್ವ ವೃದ್ಧಿಯಾಗುವುದೆಂದು ಹೇಳಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯೆ ಸುನೀತಾ ಶೆಟ್ಟಿ, ಪ್ರೌಢ ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ, ಪ್ರಾಥಮಿಕ ಶಾಲಾ ಮುಖ್ಯಗುರು ರಾಮ ನಾಯ್ಕ, ಕೆ.ಜಿ. ವಿಭಾಗ ಮುಖ್ಯಸ್ಥೆ ಮಮತಾ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ದೇಶಭಕ್ತಿಗೀತೆಗಳನ್ನು ಹಾಡಿದರು. ವೀಣಾ ಜೋಷಿ ಸ್ವಾಗತಿಸಿ, ರಾಧಾಕೃಷ್ಣ ರೈ ವಂದಿಸಿದರು. ಲತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ನಡೆದ ಸಾಮೂಹಿಕ ಯೋಗ ಪ್ರದರ್ಶನವನ್ನು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ನಮಿತಾ ನಡೆಸಿಕೊಟ್ಟರು. ದೈಹಿಕ ಶಿಕ್ಷಣ ಶಿಕ್ಷಕರಾದ ಭಾಸ್ಕರ ಗೌಡ, ದೀಪಕ್, ಗಿರೀಶ್, ವಾಣಿಶ್ರೀ ಹಾಗೂ ಹರ್ಷಿತ ಇವರು ಸಹಕರಿಸಿದರು.

Yoga Day (4)

Yoga Day (7)

Yoga Day (5)

Yoga Day (6)