ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು, ಸಮರ್ಥ ಭಾರತ ಪುತ್ತೂರು ಘಟಕ ಇವರ ವತಿಯಿಂದ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಕೊಲ, ಬಡಗನ್ನೂರು ಇಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಗಜಾನನ ವಿದ್ಯಾಸಂಸ್ಥೆಗಳು, ಈಶ್ವರಮಂಗಲ ಇದರ ಉಪಾಧ್ಯಕ್ಷ ಹಾಗೂ ಕೋಟಿ ಚೆನ್ನಯ ಸಂವರ್ಧನಾ ಪ್ರತಿಷ್ಠಾನದ ಅಧ್ಯಕ್ಷ ಕುದ್ಕಾಡಿ ನಾರಾಯಣ ರೈ ದೀಪಬೆಳಗಿಸಿ, ಸಸಿ ವಿತರಣೆ ಮಾಡುವ ಮೂಲಕ ಚಾಲನೆಗೊಳಿಸಿದರು.
ಅತಿಥಿಗಳಾಗಿ ಆಗಮಿಸಿದ ಈಶ್ವರಮಂಗಲ ಪಂಚಲಿಂಗೇಶ್ವರ ಪ್ರೌಢ ಶಾಲಾ ನಿವೃತ್ತ ಶಿಕ್ಷಕ ರಘುನಾಥ ರೈ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷೆ ರೇಖಾ ನಾಗರಾಜ್, ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೋರ್ಕರ್ ಸಂದರ್ಭೋಚಿತವಾಗಿ ಶುಭ ಹಾರೈಸಿದರು. ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಗೌಡ ಕನ್ನಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ್. ಸಿ.ಎಸ್. ಪ್ರಸ್ತಾವನೆಗೈದರು.
ವೇದಿಕೆಯಲ್ಲಿ ಸ್ಥಳೀಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್ ರೈ, ಸಮರ್ಥ ಭಾರತ ಗ್ರಾಮ ಸಂಯೋಜಕ ಸಂತೋಷ್ ಆಳ್ವ, ಮುಖ್ಯಗುರು ಉದಯ ಕುಮಾರ್ ಶರವು ಉಪಸ್ಥಿತರಿದ್ದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮ ನಾಯ್ಕ ಸ್ವಾಗತಿಸಿ, ಸ್ಥಳೀಯ ಶಾಲಾ ಸಹಶಿಕ್ಷಕ ಗಿರೀಶ್ ದರ್ಬೆತ್ತಡ್ಕ ವಂದಿಸಿದರು. ವೆಂಕಟೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸುದಿನಾ ಶೆಟ್ಟಿ, ಅಕ್ಷತಾ ಆಚಾರ್ಯ, ವಿವೇಕಾನಂದ ಶಾಲೆಯ ಸುಮಾರು ೨೫ ವಿದ್ಯಾರ್ಥಿಗಳು, ಸ್ಥಳೀಯ ಪಂಚಾಯತ್ ಸದಸ್ಯರು, ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು, ಅಂಗನವಾಡಿ ಸಿಬ್ಬಂದಿಗಳು, ಪೋಷಕ ವೃಂದದವರು ಸಹಕರಿಸಿದರು.