QR Code Business Card

ಬೆಟ್ಟಂಪಾಡಿಯಲ್ಲಿ ಕೋಟಿ ವೃಕ್ಷ ಅಭಿಯಾನ

ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು, ಸಮರ್ಥ ಭಾರತ ಪುತ್ತೂರು ಘಟಕ ಇವರ ವತಿಯಿಂದ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

vems-Bettampadi (5)

ಈ ಕಾರ್ಯಕ್ರಮವನ್ನು ಹಿರಿಯರಾದ ಸಂಜೀವ ರೈಯವರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿನೋದ್ ಬಲ್ಲಾಳ್ ಇವರಿಗೆ ಸಸಿ ವಿತರಣೆ ಮಾಡುವ ಮೂಲಕ ಚಾಲನೆಗೊಳಿಸಿ, ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಹಿರಿಯರಾದ ವೆಂಕಟ್ರಾಯರು ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಕೋಟಿ ವೃಕ್ಷ ಅಭಿಯಾನದ ಸಂಘಟಕ ಕೊಮ್ಮಂಡ ಜಗನ್ನಾಥ ರೈ, ಜಿ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿಯಾಣಿ, ಗಂಗಾಧರ ರೈ ಉಪಸ್ಥಿತರಿದ್ದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ವಿನೋದ ರೈ ಬೆಟ್ಟಂಪಾಡಿ ಗುತ್ತು ವಂದಿಸಿದರು. ಗಣೇಶ್ ಏತಡ್ಕ ಕಾರ್ಯಕ್ರಮ ನಿರ್ವಹಿಸಿದರು.

vems-Bettampadi (7)

vems-Bettampadi (1)

vems-Bettampadi (2)

vems-Bettampadi (3)

vems-Bettampadi (4)

vems-Bettampadi (6)

vems-Bettampadi

ಈ ಸಂದರ್ಭದಲ್ಲಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಕಾಲೊನಿ ಸಮೀಪದ ನೂತನ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಅಧ್ಯಕ್ಷ ಅಮ್ಮುಣಿ ಮತ್ತು ಸದಸ್ಯ ಅಣ್ಣಪ್ಪ, ಗೋಪ ಮತ್ತಿತರರು ಗಿಡಗಳನ್ನು ನೆಟ್ಟರು. ಕಾಲೊನಿಯ ಸದಸ್ಯರಿಗೆ ಗಿಡಗಳನ್ನು ವಿತರಿಸಲಾಯಿತು.

ಕಕ್ಕೂರು ಅಂಗನವಾಡಿ ಕೇಂದ್ರಗಳ ಮುಖ್ಯಸ್ಥೆ ನಾಗಮ್ಮ ಇವರಿಗೆ ಸತೀಶ್ ಕುಮಾರ ರೈ ಸಸಿ ವಿತರಿಸಿದರು. ನಂತರ ಅಂಗನವಾಡಿ ಮಕ್ಕಳೊಂದಿಗೆ ಗಿಡಗಳನ್ನು ನೆಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ಯಾಮಲಾ ಸಹಕರಿಸಿದರು. ಕಕ್ಕೂರ ಭಜನಾ ಮಂದಿರದಲ್ಲಿ ಕಾರ್ಯದರ್ಶಿ ಚಂದ್ರನ್ ತಲೆಪ್ಪಾಡಿ ಮತ್ತು ಇತರರ ಸಹಕಾರದೊಂದಿಗೆ ಗಿಡಗಳನ್ನು ನೆಡಲಾಯಿತು.

ದೂಮಡ್ಕ ಶಾಲಾ ವಠಾರದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಶೆ ಶ್ರೀಮತಿ ಪವಿತ್ರಾ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ನಮಿತಾ ಸಸಿ ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಹಾಗೂ ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಸುಮಾರು 120 ಕ್ಕೂ ಅಧಿಕ ಸಸಿಗಳನ್ನು ವಿತರಿಸಲಾಯಿತು.

ಬೆಟ್ಟಂಪಾಡಿ ವಲಯ ಕೋಟಿ ವೃಕ್ಷ ಅಭಿಯಾನದ ಜವಾಬ್ದಾರಿಯನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ, ಸಹ ಶಿಕ್ಷಕರಾದ ಗಣೇಶ್ ಏತಡ್ಕ, ನಮಿತಾ, ಸರೋಜಿನಿ ಮತ್ತು ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿರ್ವಹಿಸಿದರು. ಬೆಳಗ್ಗಿನ ಉಪಾಹಾರದ ವ್ಯವಸ್ಥೆಯನ್ನು ಕೊಮ್ಮಂಡ ಜಗನ್ನಾಥ ರೈ ಮತ್ತು ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಪ್ರಿಯದರ್ಶಿನಿ ಶಾಲಾ ಸಂಚಾಲಕ ಡಾ| ಸತೀಶ್ ವಹಿಸಿದ್ದರು.