ವಿವೇಕಾನಂದ ವಿದ್ಯಾವರ್ದಕ ಸಂಘ ಮತ್ತು ಸಮರ್ಥ ಭಾರತ ಪುತ್ತೂರು ಘಟಕ ಇದರ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಜೊತೆಗೂಡಿ ನಡೆದ ಕೋಟಿ ವೃಕ್ಷ ಆಂದೋಲವು ನರಿಮೊಗರು ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ನಡೆಯಿತು. ಬೆಳಿಗ್ಗೆ ಸರಿಸುಮಾರು 9.30 ಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 22 ವಿದ್ಯಾರ್ಥಿಗಳು ಮತ್ತು 4 ಶಿಕ್ಷಕರೊಂದಿಗೆ ಶಾಲಾ ವಾಹನದಲ್ಲಿ ಹೊರಟು, ಕಾರ್ಯಸ್ಥಾನವನ್ನು ತಲುಪಿದೆವು. ಆಂದೋಲನದ ಪ್ರಯುಕ್ತ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಅದ್ಯಕ್ಷ ಸ್ಥಾನದಿಂದ ಮಾತನಾಡಿ, ಪ್ರಕೃತಿಯು ನಮಗೆ ಜೀವಿತಾವಧಿಯಲ್ಲಿ ಎಲ್ಲವನ್ನು ಕೊಟ್ಟಿದೆ. ಮುಖ್ಯವಾಗಿ ಆಮ್ಲಜನಕವನ್ನು ಯಥೇಚ್ಚವಾಗಿ ನಾವು ಪಡೆಯುತ್ತಿದ್ದು, ನಮ್ಮ ಕಾಲಾನಂತರದಲ್ಲಿ ಅದನ್ನು ಹಿಂತಿರುಗಿಸಿ ಕೊಡಬೇಕಾದದ್ದು ಅಷ್ಟೇ ಮುಖ್ಯ ಹಾಗಾಗಿ ನಾವು ನೆಟ್ಟಂತಹ ಗಿಡಗಳನ್ನು ಪೋಷಿಸಿ ಬೆಳೆಸಬೇಕು, ಹಾಗಾದಾಗ ಮಾತ್ರ ಈ ಆಂದೋಲನವು ಸಾರ್ಥಕವಾಗುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪರೀಕ್ಷಿತ್ ತೋಲ್ಪಾಡಿ ಆಗಮಿಸಿದ್ದು, ನಾವು ಬದುಕಲು ಹಸಿರು ಪರಿಸರ ಬೇಕೇಬೇಕು, ಇಲ್ಲವಾದಲ್ಲಿ ನಮ್ಮ ಮುಂದಿನ ಪೀಳಿಗೆಯ ಬದುಕು ವಿನಾಶದಂಚನ್ನು ತಲುಪುತ್ತದೆ ಎಂದು ಜಾಗೃತಿಯನ್ನು ಉಂಟುಮಾಡಿದರು. ನಮ್ಮ ಶಾಲಾ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಮೋಹಿನಿ ಇವರು ವೇದಿಕೆಯಲ್ಲಿದ್ದು, ಮಕ್ಕಳಿಗೆ ಆಂದೋಲನದ ಪ್ರಾಮುಖ್ಯತೆಯನ್ನು ತಿಳಿಸಿದರು. ನರಿಮೊಗರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ನವೀನ್ ರೈ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ರೀ ಜಯರಾಮ್ ಪೂಜಾರಿ ನಿರ್ವಹಿಸಿ, ವಂದಿಸಿದರು. ಶಾಲಾ ಶಿಕ್ಷಕರಾದ ರಾಜ್‌ಶೇಖರ್, ಧನ್‌ರಾಜ್, ದೀಪಕ್, ಗ್ರಾಮ ಪಂಚಾಯತ್ ಸದಸ್ಯರು, ಊರಿನ ಪರಿಸರ ಪ್ರೀಯರು ಹಾಜರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಮತ್ತು ಶಾಲಾ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಮೋಹಿನಿ ಜೊತೆಗೂಡಿ ನರಿಮೊಗರು ವ್ಯಾಪ್ತಿಯಲ್ಲಿ ಗಿಡ ನೆಟ್ಟು ಚಾಲನೆ ನೀಡಿದರು. ಐಟಿಐ ಕಾಲೇಜು ಸುತ್ತಲಿನ ಪ್ರದೇಶದಲ್ಲಿ ಶಾಲಾ ಮಕ್ಕಳೆಲ್ಲರೂ ಅತ್ಯುತ್ಸಾಹದಿಂದ ಗಿಡ ನೆಡುತ್ತಾ ಶಿಕ್ಷಕರು ಮತ್ತು ಊರ ಜನರೊಂದಿಗೆ ಸಂಭ್ರಮಿಸಿದರು. ಶ್ರೀ ಉಮಾಮಹೇಶ್ವರ ದೇವಸ್ಥಾನ ಮಜಲುಮಾರು ಇದರ ವತಿಯಿಂದ ಉಪಹಾರ ವ್ಯವಸ್ಥೆಯನ್ನು ಮಾಡಲಾಯಿತು.
ತದನಂತರದಲ್ಲಿಶಾಲಾ ವಾಹನದಲ್ಲಿ ಪಂಜಳಕ್ಕೆ ಹೊರಟು, ಅಲ್ಲಿನ ಅಂಗನವಾಡಿ ವ್ಯಾಪ್ತಿಯಲ್ಲಿ ಗಿಡ ನೆಡಲಾಯಿತು. ಅಲ್ಲಿಂದ ಶ್ರೀ ಉಮಾಮಹೇಶ್ವರ ದೇವಸ್ಥಾನ ಮಜಲುಮಾರು ವ್ಯಾಪ್ತಿಯಲ್ಲಿ ಗಿಡ ನೆಡಲಾಯಿತು. ಬಳಿಕ ಶ್ರೀ ದೇವರ ದರ್ಶನ ಪಡೆದು, ದೇವಸ್ಥಾನದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದವನ್ನು ಸ್ವೀಕರಿಸಿ, ಎಲ್ಲರಿಗೂ ಧನ್ಯವಾದ ಸಲ್ಲಿಸಿ ತೆರಳಿದೆವು. ಸುಮಾರು 60 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.