ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು, ಸಮರ್ಥ ಭಾರತ ಪುತ್ತೂರು ಘಟಕ ಇವರ ವತಿಯಿಂದ ಕೋಟಿ ವೃಕ್ಷ ಆಭಿಯಾನದ ಅಂಗವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಗುಣಶ್ರೀ ವಿದ್ಯಾಲಯ, ಕುಂಡಡ್ಕ, ದ.ಕ.ಜಿ.ಪಂ. ಹಿ. ಪ್ರಾ. ಶಾಲೆ, ಕುಂಡಡ್ಕ ಮತ್ತು ದ.ಕ.ಜಿ.ಪಂ. ಹಿ. ಪ್ರಾ. ಶಾಲೆ, ನಾಟೆಕಲ್ಲು ಈ ಮೂರು ಶಾಲೆಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶ್ರೀಯುತ ವೆಂಕಟೇಶ್ವರ ಅಮೈ ಇವರ ಅಧ್ಯಕ್ಷತೆಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗುಣಶ್ರೀ ವಿದ್ಯಾಲಯ ಕುಂಡಡ್ಕದಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗು ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಯುತ ಯತೀಶ್ ರವರು ಭಾಗವಹಿಸಿದರು. ದ.ಕ.ಜಿ.ಪಂ. ಹಿ. ಪ್ರಾ. ಶಾಲೆ ನಾಟೆಕಲ್ಲು ಶಾಲೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಪುಷ್ಪಾವತಿಯವರು ಭಾಗವಹಿಸಿದರು. ಮತ್ತು ದ.ಕ.ಜಿ.ಪಂ. ಹಿ. ಪ್ರಾ. ಶಾಲೆ, ಕುಂಡಡ್ಕದಲ್ಲಿ ಮುಖ್ಯ ಆತಿಥಿಗಳಾಗಿ ಶ್ರೀಯುತ ಜಯಪ್ರಕಾಶರು ಭಾಗವಹಿಸಿದರು.
ಸಭೆಯಲ್ಲಿ ಪರಿಸರದ ಮಹತ್ವ, ನೀರಿನ ಮಹತ್ವವನ್ನು ಹೇಗೆ ಕಾಪಾಡಬೇಕು ಎಂಬುದನ್ನು ಸವಿವರವಾಗಿ ವಿವರಿಸಿದರು. ಕಾರ್ಯಕ್ರಮವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಹಿಸಿದ್ದರು. ಕೌಶಲ್ ಸುಬ್ರಹ್ಮಣ್ಯ ಅತಿಥಿಗಳನ್ನು ಸ್ವಾಗತಿಸಿ, ರವಿಶಂಕರ್ ವಂದಿಸಿದರು ಹಾಗು ರಾಕೇಶ್ ಕೃಷ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲಾ ಶಿಕ್ಷಕರುಗಳಾದ ಶ್ರೀಮತಿ ಭಾರತಿ. ಎಸ್.ಎ, ಶ್ರೀಯುತ ಮಹೇಶ್, ಶ್ರೀಯುತ ಟೀಲಾಕ್ಷ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್‌ಗಳ ಸಹಕಾರದೊಂದಿಗೆ ನಡೆಯಿತು.