QR Code Business Card

ಕೆಮ್ಮಿಂಜೆ ಗ್ರಾಮದಲ್ಲಿ ಕೋಟಿ ವೃಕ್ಷ ಆಂದೋಲನ

ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು, ಸಮರ್ಥ ಭಾರತ ಪುತ್ತೂರು ಘಟಕ ಇದರ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಿವೇಕ ನಗರ ಪುತ್ತೂರು ಇದರ ನೇತೃತ್ವದಲ್ಲಿ ಕೆಮ್ಮಿಂಜೆ ಗ್ರಾಮದ ’ಕೋಟಿ ವೃಕ್ಷ ಆಂದೋಲನಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಲಾಯಿತು.

Kemminje (3)

ಸಭಾಧ್ಯಕ್ಷತೆಯನ್ನು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಕಾರ್ಯಾಧ್ಯಕ್ಷರಾದ ಶ್ರೀಯುತ ಮುರಳೀಧರ ಬಂಗಾರಡ್ಕ ವಹಿಸಿ ಪ್ರಕೃತಿಯೊಂದಿಗೆ ನಾವು ಬೆಳೆಯಬೇಕು ಎಂದರು. ಮುಖ್ಯ ಅತಿಥಿಗಳಾಗಿ ಎ.ಪಿ.ಎಮ್.ಸಿಯ ಸದಸ್ಯರಾದ ಶ್ರೀಮತಿ ತ್ರಿವೇಣಿ ಕರುಣಾಕರ ಪೆರ್‍ವೋಡಿ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಸುನಿತಾ ರವೀಂದ್ರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Kemminje (2)

Kemminje

Kemminje (1)

ಸ್ಥಳೀಯರಾದ ಶ್ರೀ ಸುಧೀರ್ ಶೆಟ್ಟಿ, ಶ್ರೀ ಶಿವರಂಜನ್, ಶ್ರೀ ಶ್ರೀಕಾಂತ್ ಆಚಾರ್ಯ, ಶ್ರೀ ಅರುಣ್ ಕುಮಾರ್ ಪುತ್ತಿಲ, ವಾಸುದೇವ ಸಾಲಿಯಾನ್, ಶ್ರೀ ಗೋಪಾಲಕೃಷ್ಣ ನೈತಾಡಿ, ಶ್ರೀ ಸತೀಶ್ ಪೂಜಾರಿ, ಶ್ರೀ ಉಮೇಶ್ ಗೌಡ, ಶ್ರೀ ರಮೇಶ್ ಗೌಡ, ಶ್ರೀ ಶಂಕರನಾರಾಯಣ ಭಟ್ ಇವರು ಉಪಸ್ಥಿತರಿದ್ದರು. ಶ್ರೀ ಬಾಲಚಂದ್ರ ಗೌಡ ವಂದಿಸಿ, ಶ್ರೀ ಅಶೋಕ್ ಕುಮಾರ್ ಪುತ್ತಿಲ ಸ್ವಾಗತಿಸಿ, ನಿರೂಪಿಸಿದರು. ತದನಂತರ ನೈತಾಡಿ ಅಂಗನವಾಡಿ, ಹಿಂದಾರು ಕಂಪ ಅಂಗನವಾಡಿ, ಕೆಮ್ಮಿಂಜೆ ಗ್ರಾಮದ ಇತರ ಕಡೆಗಳಲ್ಲಿ ಸ್ಥಳಿಯರು, ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ ನೆರವಿನೊಂದಿಗೆ ಸಸಿಗಳನ್ನು ನೆಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.