ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಮನೆ ಹಾಗೂ ಶಾಲೆಯ ವಾತಾವರಣ ಪೂರಕ. ಪೋಷಕರು ಹಾಗೂ ಶಿಕ್ಷಕರು ಮಗುವಿನ ಭವಿಷ್ಯವನ್ನು ರೂಪಿಸುವವರಾಗಬೇಕು ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ಹೇಳಿದರು. ಅವರು ದಿನಾಂಕ 20-7-2017 ರಂದು ಶಾಲಾ ಸಭಾಂಗಣದಲ್ಲಿ 7ನೇ ತರಗತಿಯ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪ್ರಾಥಮಿಕ ಶಾಲಾ ಮುಖ್ಯಸ್ಥ ರಾಮ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಶಾಲೆಯ ಈ ವರೆಗಿನ ಸಾಧನೆಗಳನ್ನು ಪರಿಚಯಿಸಿದರು. ಸಹಶಿಕ್ಷಕಿ ಶ್ರೀಮತಿ ರಶ್ಮಿ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ಸುಮಲತಾ ವಂದಿಸಿದರು. ಕುಮಾರಿ ಶ್ರೀನಿಧಿ ಆಳ್ವ ಕಾರ್ಯಕ್ರಮ ನಿರೂಪಿಸಿದರು.