ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ದಿನಾಂಕ 29-7-2017 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈಯವರು ಮಕ್ಕಳಿಗೆ ದೇಶಭಕ್ತಿಯ ಪಾಠ ಮನೆಯಿಂದಲೇ ಆರಂಭವಾಗಬೇಕು ಎಂದರು. ಶಾಲಾ ಆಡಳಿತ ಮಂಡಳಿ ಸದಸ್ಯ ಡಾ| ಸುರೇಶ್ ಪುತ್ತೂರಾಯ ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರ ಜೊತೆಗೆ ಪೋಷಕರ ಪಾತ್ರವೂ ಮುಖ್ಯ. ಇಂದಿನ ಶಿಕ್ಷಣದಲ್ಲಿ ತಂತ್ರಜ್ಞಾನ ಅಗತ್ಯ. ಆದರೆ ಸಂಪೂರ್ಣವಾಗಿ ಅದನ್ನೇ ಅವಲಂಬಿಸಬಾರದು. ಸ್ವಂತಿಕೆಯೂ ಅಗತ್ಯ ಎಂದು ಹೇಳಿದರು.
ಪ್ರಾಥಮಿಕ ವಿಭಾಗ ಮುಖ್ಯಸ್ಥ ರಾಮ ನಾಯ್ಕ್ ಪ್ರಸ್ತಾವನೆಗೈದರು. ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಪೋಷಕರ ಪ್ರಶ್ನೆಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ೯ನೇ ತರಗತಿಯ ವಿದ್ಯಾರ್ಥಿಗಳ ಪೋಷಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀಮತಿ ಪ್ರೇಮಾ ಶಂಕರ್ ಪ್ರಾರ್ಥಿಸಿದರು. ಶ್ರೀಮತಿ ವೀಣಾ ಜೋಷಿ ಸ್ವಾಗತಿಸಿ, ವೆಂಕಟೇಶ್ ಪ್ರಸಾದ್ ವಂದಿಸಿದರು. ಶ್ರೀಮತಿ ಶಾರದಾ ಶೆಟ್ಟಿ ಹಾಗೂ ಶ್ರೀಮತಿ ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು.