QR Code Business Card

ರಕ್ಷಾಬಂಧನ

ರಕ್ಷೆ ಎಂಬುದು ಒಗ್ಗಟ್ಟಿನ ಸಂಕೇತ. ದೇಶದ ಕುರಿತಾಗಿ ನಾವೆಲ್ಲರೂ ಒಟ್ಟಾಗಿ ಯೋಚಿಸಿದಾಗ ಮಾತ್ರ ದೇಶದ ಉಳಿವು ಸಾಧ್ಯ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ವೆಂಕಟೇಶ್ವರ ಅಮೈ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಶಾಲಾ ಸಂಪರ್ಕಾಧಿಕಾರಿ ಶ್ರೀ ಶ್ಯಾಮ ಪ್ರಸಾದ್, ಹಿರಿಯರಾದ ಶ್ರೀ ಗೋಪಾಲ ಭಟ್ ಶ್ರೀ ರಾಜಶೇಖರ್ ಹಾಗೂ ಪೋಷಕರಾದ ಶ್ರೀರಾಮ ಪಾಟಾಜೆಯವರು ಶಾಲೆಯ ಪ್ರೌಢ ಹಾಗೂ ಪ್ರಾಥಮಿಕ ವಿಭಾಗಗಳ ಕಾರ್ಯಕ್ರಮಗಳಲ್ಲಿ ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು.

Rakshabandhan2

Rakshabandhan1

ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ, ಶ್ರೀಮತಿ ದಿವ್ಯರಾಣಿ, ಕುಮಾರಿ ಅಂಜಲಿ ಸ್ವಾಗತಿಸಿ, ಸಾಯಿಗೀತಾ ರಾವ್, ಕುಮಾರಿ ಶ್ರುತಿ ಎಂ., ಶ್ರೀಮತಿ ಪ್ರತಿಮಾ ವಂದಿಸಿದರು. ಶ್ರೀಮತಿ ಸಹನಾ ಪೈ, ಶ್ರೀಮತಿ ಯಶೋಧಾ ಹಾಗೂ ಕುಮಾರಿ ಶ್ರುತಿ ಎನ್. ಕಾರ್ಯಕ್ರಮ ನಿರೂಪಿಸಿದರು. ಶ್ರೀ ಧನರಾಜ್ ರಕ್ಷಾಬಂಧನದ ಸಂದೇಶವನ್ನು ವಾಚಿಸಿದರು. ಶಾಲಾ ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಾಗೂ ಶಾಲೆಯ ಶಿಕ್ಷಕ ವೃಂದದವರು ಪರಸ್ಪರರಿಗೆ ರಕ್ಷೆ ಕಟ್ಟಿ ಸೋದರತೆ ನಿರೂಪಿಸಿದರು.