ವಿದ್ಯಾಭಾರತಿ ಕರ್ನಾಟಕ, ಶ್ರೀ ರಾಮ ವಿದ್ಯಾಸಂಸ್ಥೆಗಳು ಕಲ್ಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 10-8-2017 ಮತ್ತು 11-8-2017 ರಂದು ನಡೆದ ರಾಜ್ಯಮಟ್ಟದ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಪೂರ್ವಿಕಾ, ಚಿತ್ತಾರ ಹಿರಿಂಜ, ಪ್ರತೀಕ್ಷಾ.ಸಿ.ಎಚ್, ಶ್ರಾವ್ಯ ಶೆಟ್ಟಿ, ಶಿವಾನಿ, ಶ್ರದ್ಧಾ, ಕೃತಜ್ಞ, ಪೂಜಾಶ್ರೀ, ಸುಷ್ಮಾ, ಜ್ಯೋತಿಕಾ, ಶ್ರಾವ್ಯಾ ಇವರ ತಂಡ ಪ್ರಥಮ ಸ್ಥಾನ ಪಡೆದು, ಆಗಸ್ಟ್ 26, 27 ರಂದು ಆಂಧ್ರದ ವಿಜಯವಾಡದಲ್ಲಿ ನಡೆಯಲಿರುವ ದಕ್ಷಿಣ ಪ್ರಾಂತೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.