ದ.ಕ.ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಪೆರ್ನಾಜೆ ಶ್ರೀ ಸೀತಾರಾಘವ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿಜಿತ್ ಕೃಷ್ಣ ಐತಾಳ್ (10ನೇ) ಸಂಸ್ಕೃತ ಧಾರ್ಮಿಕ ಪಠಣ, ಸನ್ನಿಧಿ ಕಜೆ (9ನೇ) ಗಝ್ಹಲ್, ಖುಷಿ (8ನೇ) ವೈಯಕ್ತಿಕ ಯಕ್ಷಗಾನ, ರಶ್ಮಿ. ಕೆ.ಪಿ (8ನೇ) ರಂಗೋಲಿ, ಕೃತಿ .ಕೆ (9ನೇ) ತೆಲುಗು ಭಾಷಣದಲ್ಲಿ ಪ್ರಥಮ ಸ್ಥಾನ ಹಾಗೂ ರಾಕೇಶ್ ಕೃಷ್ಣ (8ನೇ) ಕನ್ನಡ ಭಾಷಣ, ಅನಂತ್ ಶಾನ್ಭಾಗ್ (9ನೇ) ಹಿಂದಿ ಭಾಷಣ, ಅಮೃತಾ ಭಟ್ (10ನೇ) ಭಾವಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದು ಸೆಪ್ಟ್ಂಬರ್ 6 ರಂದು ನಡೆಯುವ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಆರಿನ್ ರಗ್ಷನ್ (10ನೇ) ಉರ್ದು ಭಾಷಣ, ಸತೀಶ್ (8ನೇ) ತಮಿಳು ಭಾಷಣ, ಶರೂನ್ (8ನೇ) ತುಳು ಭಾಷಣ, ಮಹಮ್ಮದ್ ನೌಫಲ್ (10ನೇ) ಅರೇಬಿಕ್ ಪಠಣದಲ್ಲಿ ತೃತೀಯಸ್ಥಾನ ಮತ್ತು ಕಲೋತ್ಸವದ ನೃತ್ಯ ಸ್ಪರ್ಧೆಯಲ್ಲಿ 10ನೇ ತರಗತಿಯ ಸಿಂಚನಾ. ಕೆ, ಸಿಂಚನಾ. ಆರ್, ಸಾಕ್ಷಿ. ಜೆ. ರೈ, ಅಶ್ವಿನಿ. ಜೆ, ಐಶ್ವರ್ಯಾ. ಕೆ, ಚೈತ್ರಾ. ಬಿ, ಲಾವಣ್ಯ. ಈ, ದೃಶ್ಯ . ವೈ. ರೈ ಇವರ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ್ ಮಿಷನ್, ದ.ಕ. ಜಿಲ್ಲಾ ಪಂಚಾಯತ್ ಇದರ ವತಿಯಿಂದ ಏರ್ಪಡಿಸಲಾದ ಭಾಷಣ ಸ್ಪರ್ಧೆಯಲ್ಲಿ ಸಿಂಚನಾ ಲಕ್ಷ್ಮಿ (9ನೇ) ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ ರೈ ತಿಳಿಸಿರುತ್ತಾರೆ.