ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನವೆಂಬರ್ 10 ರಿಂದ 14 ರ ವರೆಗೆ ವಾರಂಗಲ್ನಲ್ಲಿ ನಡೆದ ರಾಷ್ಟ್ರಮಟ್ಟದ [ಎಸ್.ಜಿ.ಎಫ್.ಐ] ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 14 ರ ವಯೋಮಾನದ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ತಂಡದಲ್ಲಿ 8 ನೇ ತರಗತಿಯ ಸ್ವಾತಿಕ್ ಶಿವಾನಂದ್ ಮತ್ತು ಗಗನ್ ಎಂ.ಎಸ್, 6ನೇ ತರಗತಿಯ ಪಂಕಜ್ ಭಟ್, ಮನ್ವಿತ್ ಕಣಜಾಲು ಮತ್ತು ದೀಪ್ತಿಲಕ್ಷ್ಮಿ ಭಾಗವಹಿಸಿದ್ದು, ಮನ್ವಿತ್ ಕಣಜಾಲು ಮತ್ತು ದೀಪ್ತಿಲಕ್ಷ್ಮಿ ಉತ್ತಮ ಆಟಗಾರರಾಗಿ ಬೋರ್ಡ್ ಪ್ರೈಸ್ ಗಳಿಸಿರುತ್ತಾರೆ.