QR Code Business Card

ರಾಷ್ಟ್ರ ಮಟ್ಟದ ಎಸ್.ಜಿ.ಎಫ್.ಐ. ಗೆ ಆಯ್ಕೆ

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಮತ್ತು ಭಾರತೀಯ ಆದರ್ಶ್ ವಿದ್ಯಾ ಮಂದಿರ್ ಬಿಕ್ನೇರ್ ರಾಜಸ್ಥಾನ ಇಲ್ಲಿ ನವೆಂಬರ್ 16 ರಿಂದ 18 ರ ವರೆಗೆ ನಡೆದ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಎಸ್.ಜಿ.ಎಫ್.ಐ. ಗೆ ಆಯ್ಕೆಯಾಗಿದ್ದಾರೆ. 17 ರ ವಯೋಮಾನದ ವಿಭಾಗದಲ್ಲಿ ಅಮೃತ್.ಸಿ, 10 ನೇ ತರಗತಿ- 2 ಚಿನ್ನ, 1 ಬೆಳ್ಳಿ. ಪರ್ಜನ್ಯ ಶರ್ಮ, 9 ನೇ ತರಗತಿ- 2 ಬೆಳ್ಳಿ, 1 ಕಂಚು, 14 ರ ವಯೋಮಾನದಲ್ಲಿ ನೂತನ್ ಕುಮಾರ್, 8 ನೇ ತರಗತಿ- 2 ಚಿನ್ನ, 3 ಬೆಳ್ಳಿ, ಆತ್ಮೀಯಾ ಎಮ್ ಕಶ್ಯಪ್, 6 ನೇ ತರಗತಿ- 1 ಚಿನ್ನ, 3 ಬೆಳ್ಳಿ, 1 ಕಂಚು, ಸಾತ್ವಿಕ್ ಆಚಾರ್ಯ್, 8 ನೇ ತರಗತಿ-3 ಬೆಳ್ಳಿ, 2 ಕಂಚು, ಅನ್ವೇಶ್ ರೈ, 8ನೇ ತರಗತಿ-2 ಬೆಳ್ಳಿ ಪಡೆದುಕೊಂಡಿದ್ದಾರೆ. ಇಲ್ಲಿ ಅಮೃತ್ ಸಿ, ಪರ್ಜನ್ಯ ಶರ್ಮ, ನೂತನ್ ಕುಮಾರ್, ಆತ್ಮೀಯಾ ಎಮ್ ಕಶ್ಯಪ್, ಸಾತ್ವಿಕ್ ಆಚಾರ್ಯ ಇವರು ಮುಂದೆ ನಡೆಯುವ ಎಸ್.ಜಿ.ಎಫ್.ಐ. ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

SGFI