QR Code Business Card

ಜಿಲ್ಲಾಮಟ್ಟದ 25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ : ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ

ಕರ್ನಾಟಕ ವಿಜ್ಞಾನ ಪರಿಷತ್ , ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಜಿಲ್ಲಾಮಟ್ಟದ 25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ಮೂಡುಬಿದ್ರೆಯ ರೋಟರಿ ವಿದ್ಯಾಸಂಸ್ಥೆಯಲ್ಲಿ ದಿನಾಂಕ 22.11.2017 ರಂದು ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಮತ್ತು ಕಿರಿಯರ ವಿಭಾಗದ ಎರಡೂ ತಂಡಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

vems-ncsc

ಹಿರಿಯರ  ವಿಭಾಗದಲ್ಲಿ ಸಿಂಚನಲಕ್ಷ್ಮಿ(9ನೇ ತರಗತಿ), ಪೂರ್ಣ ಎಸ್. ಪ್ರಸಾದ್ (9ನೇ ತರಗತಿ), ಚೈತನ್ಯ (9ನೇ ತರಗತಿ), ಧ್ಯಾನ್ ಎಸ್. ರಾವ್ (9ನೇತರಗತಿ), ಶಶಾಂಕ್ ಬಿ. (9ನೇ ತರಗತಿ), ಭಾಗವಹಿಸಿದ್ದು, ಇವರು “Accident prevention and automatic speed control” ಎಂಬ ಯೋಜನಾ ವರದಿಯನ್ನು ಮಂಡಿಸಿದ್ದು, 9ನೇ ತರಗತಿಯ ಸಿಂಚನಲಕ್ಷ್ಮಿ ಯುವ ವಿಜ್ಞಾನಿಯಾಗಿ ಆಯ್ಕೆಯಾಗಿದ್ದು, ಅದ್ಭುತ ಪ್ರಶಂಸೆಗೆ ಪಾತ್ರವಾಗಿದೆ. ಕಿರಿಯ ವಿಭಾಗದಲ್ಲಿ ಮಂಡಿಸಿದ ಯೋಜನಾ ವರದಿ ಪೃಥ್ವಿ- An Innovative method of sowing seeds” ರಾಕೇಶ್ ಕೃಷ್ಣ (8ನೇ ತರಗತಿ), ಪ್ರಥಮ ಶೆಣೈ (7ನೇ), ಅಮೋಘ (7ನೇ), ಆಶ್ರಯ (7ನೇ) ಮತ್ತು ಯಶಸ್ವಿ ಶೆಟ್ಟಿ (7ನೇ) ಪ್ರದರ್ಶಿಸಿದ ಯೋಜನೆಯು ಉತ್ತಮ ಗ್ರೇಡ್ ಪಡೆದುಕೊಂಡಿದೆ. ಇಲ್ಲಿನ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಶಾಂತಿ, ಶ್ರೀಮತಿ ಶಾರದಾ ಶೆಟ್ಟಿ, ಶ್ರೀಮತಿ ಸಂಧ್ಯಾ ಹಿರಿಯರ ತಂಡದ ಮಾರ್ಗದರ್ಶಕರಾಗಿಯೂ, ಶ್ರೀಮತಿ ಸಿಂಧು ಮತ್ತು ಶ್ರೀಮತಿ ರೇಖಾ ಕಿರಿಯರ ಯೋಜನ ಕಾರ್ಯದ ಮಾರ್ಗದರ್ಶಕರಾಗಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.