ಶೈಕ್ಷಣಿಕ ವರ್ಷ 2018-19 ನೇ ಸಾಲಿನ 8 ನೇ ತರಗತಿಯ ಪೋಷಕರ ಸಭೆಯು ದಿನಾಂಕ 14-7-2018 ರ ಶನಿವಾರ ಮಧ್ಯಾಹ್ನ 2 ಗಂಟೆಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಶ್ರೀ ಭೀರ್ಮಣ್ಣ ಗೌಡರು ಶಾಲೆಯ ಅಭಿವೃದ್ಧಿ ಹಾಗೂ ಯೋಜನೆಗಳ ಬಗ್ಗೆ ತಿಳಿಯಪಡಿಸಿದರು. ಮುಖ್ಯ ಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಶಾಲೆಯ ದೈನಂದಿನ ಹಾಗೂ ಮಕ್ಕಳ ಶೈಕ್ಷಣಿಕ ವಿವರಗಳನ್ನು ತಿಳಿಸಿದರು. ಕುಮಾರಿ ಹಿತಾರವರು ಪ್ರಾರ್ಥನೆ ಮಾಡಿ, ಶ್ರೀಮತಿ ಪವಿತ್ರಾ ರೈ ಸ್ವಾಗತಿಸಿದರು. ಶ್ರೀಮತಿ ನಿಶ್ಮಿತಾ ಧನ್ಯವಾದ ಅರ್ಪಿಸಿದರು. ಶ್ರೀಮತಿ ಲತಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಜಿ.ಎಲ್. ಆಚಾರ್ಯರವರಿಗೆ ಸಂತಾಪ ಸೂಚಿಸಿ ಸ್ಮರಿಸಲಾಯಿತು. ಎಲ್ಲಾ ಶಿಕ್ಷಕರ ಸಹಕಾರದಿಂದ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂತು.