QR Code Business Card

ಭಾರತದ ಧ್ವಜ ಇಂದು ವಿವೇಕಾನಂದದಲ್ಲಿ ಹಾರುತ್ತಿರುವುದು ಗಾಳಿಯಿಂದ ಅಲ್ಲ ಗಡಿ ಕಾಯುವ ಸೈನಿಕರಿಂದ – ಆದರ್ಶಗೋಖಲೆ

ನಾವು ಮನಃಪೂರ್ವಕವಾಗಿ ಮಾಡಿದ ಪ್ರಾರ್ಥನೆಯಿಂದ ದೇಶಕಾಯುವ ಸೈನಿಕರಿಗೆ ಒಳಿತಾಗಬೇಕು. ಆಗ ಮಾತ್ರ ನಮ್ಮ ಪ್ರಾರ್ಥನೆ ಅರ್ಥಪೂರ್ಣವೆನಿಸುತ್ತದೆ. ಇಂದು ನಾವು ನೀವು ಉಸಿರಾಡುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ ಎಂದು ಖ್ಯಾತ ವಾಗ್ಮಿ ಶ್ರೀ ಆದರ್ಶ ಗೋಖಲೆ ಹೇಳಿದರು. ಅವರು ದಿನಾಂಕ 27-7-2018 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಗಡಿಕಾಯುವ ಯೋಧರು ನಮ್ಮ ಬಾಳಿನ ಆದರ್ಶವಾಗಬೇಕು ಎಂದು ಹೇಳಿದ ಅವರು ಸೈನಿಕರು ಗಡಿಯಲ್ಲಿ ಎದುರಿಸುವ ಸಮಸ್ಯೆಗಳು, ಅಲ್ಲಿನ ಪರಿಸ್ಥಿತಿ, ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸುವ ಅವರ ಸ್ಮರಣೆ ಸದಾ ನಮಗೆ ದಾರಿದೀಪವಾಗಲಿ ಎಂದು ಹೇಳಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಮುರಳೀಧರ್, ಎಸ್. ಆರ್. ಕೆ. ಲ್ಯಾಡರ್ಸ್‌ನ ಶ್ರೀ ಕೇಶವ, ಎ.ವಿ.ಜಿ. ಎಸೋಸಿಯೇಟ್ಸ್‌ನ ಶ್ರೀ ಎ.ವಿ.ನಾರಾಯಣ್, ಉದ್ಯಮಿ ಶ್ರೀ ವಿಕ್ರಂ ನಾಯಕ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಾದ ಹರ್ಷಿತ್, ಸನ್ಮಿತ್, ದುರ್ಗಾಶ್ರೀಶ, ಪೂಜಿತ್ ಮತ್ತು ವಿಶ್ವಮಿಹಿರ ಸೈನಿಕರ ಸಂದೇಶ ತಿಳಿಸುವ ಹಾಡು ಹಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವೆಂಕಟೇಶ್ ಪ್ರಸಾದ್ ವಂದಿಸಿದರು. ಶ್ರೀ ಗಣೇಶ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.