QR Code Business Card

ವಿದ್ಯಾಭಾರತಿ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲೆ ಮತ್ತು ಸರಸ್ವತಿ ವಿದ್ಯಾಸಂಸ್ಥೆ ಕಡಬ ಇವರ ಜಂಟಿ ಆಶ್ರಯದಲ್ಲಿ ಜುಲೈ 26 ರಂದು ಸರಸ್ವತಿ ವಿದ್ಯಾಸಂಸ್ಥೆ ಕಡಬ ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕರ ತಂಡ ಭಾಗವಹಿಸಿ ಪ್ರಥಮ ಸ್ಥಾನ ಹಾಗೂ ಕಿಶೋರವರ್ಗದ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಬಾಲವರ್ಗದ ಬಾಲಕರ ತಂಡ

ಬಾಲವರ್ಗದ ಬಾಲಕರ ತಂಡದಲ್ಲಿ ಪವನ್, ಆಕಾಶ್, ಮನಪ್ರೀತ್, ಪಲೀಕ್, ಫಿರ್‌ಕಟ್, ಯೋಬಿಟ್ಮಿ, ಗುರುದತ್ತ್, ಭುವಿನ್, ಶಮಿತ್, ಸ್ನೇಹಿತ್, ಹಿತೇಶ್ ಭಾಗವಹಿಸಿರುತ್ತಾರೆ ಹಾಗೂ ಇವರು ಜುಲೈ 30 ರಂದು ಶ್ರೀರಾಮ ಕಲ್ಲಡ್ಕದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಕಿಶೋರವರ್ಗದ ಬಾಲಕರ ತಂಡ

ಕಿಶೋರವರ್ಗದ ಬಾಲಕರ ತಂಡದಲ್ಲಿ ಶ್ರೀಜಿತ್ ರೈ, ರಕ್ಷಿತ್, ನಿಶಾಂತ್, ರೆವಂತ್, ಅನ್ವೇಶ್ ರೈ, ಸುಶಾನ್ ರೈ, ಕೌಶಲ್, ಸನ್‌ಮಿತ್, ಶಶಾಂಕ್, ಪ್ರಣಾವ್, ಕೀರ್ತನ್, ಮೌಶಿನ್ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.