ದಿನಾಂಕ 31-7-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯ ಪೋಷಕರ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಮಕ್ಕಳ ಸರ್ವಾಂಗೀನ ಬೆಳವಣಿಗೆಗೆ ಶಿಕ್ಷಕರು ಮಾತ್ರವಲ್ಲದೆ ಪೋಷಕರ ಪಾತ್ರ ಕೂಡ ಬಹು ಮುಖ್ಯವಾದದ್ದು. ಹಾಗಾಗಿ ಪೋಷಕರು ತಮ್ಮ ನಿಗದಿತ ಸಮಯವನ್ನು ಮಕ್ಕಳಿಗೆ ನೀಡಬೇಕು. ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕೆಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ಮುರಳೀಧರ.ಕೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಧ್ಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆ.ಜಿ.ವಿಭಾಗದ ಮುಖ್ಯಸ್ಥೆ ಮಮತಾ ಹಾಗೂ ತರಗತಿ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಪ್ರತಿಮಾ ಸ್ವಾಗತಿಸಿ, ಶಿಕ್ಷಕಿ ಪವಿತ್ರ ವಂದಿಸಿ, ಶಿಕ್ಷಕಿ ಸುಮಲತ ಕಾರ್ಯಕ್ರಮ ನಿರೂಪಿಸಿದರು.