ಪುತ್ತೂರು ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯು ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ಉಪ್ಪಳಿಗೆಯಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ “ಕ್ಷಮಸರ್ವೇಣ” ಎಂಬ ನಾಟಕ ಪ್ರಸ್ತುತ ಪಡಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 9ನೇ ತರಗತಿಯ ರಾಕೇಶ್ಕೃಷ್ಣ, ವಿಜಿತ್, ಹರ್ಷಿತ್, ತಸ್ವಿ, ವೆನ್ಯ ಮತ್ತು ೮ನೇ ತರಗತಿಯ ಆಶ್ರಯ , ಆದ್ಯ, ಮತ್ತು ಇಶಾ ಭಾಗವಹಿಸಿದ್ದರು. ಶಿಕ್ಷಕರಾದ ರಾಜ್ಶೇಖರ್ ಮತ್ತು ಶ್ರೀಮತಿ ಶಾರದಾ ಶೆಟ್ಟಿ ಚಿತ್ರಕಥೆ ಬರೆದಿದ್ದುಮೌನೇಶ್ ವಿಶ್ವಕರ್ಮ ನಿರ್ದೇಶನ ಮಾಡಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.