ತಾಲೂಕು ಮಟ್ಟದ ಪ್ರೌಢಶಾಲಾ ವಿಜ್ಞಾನ ಪ್ರದರ್ಶನವು ಇತ್ತೀಚೆಗೆ ಸರಕಾರಿ ಪದವಿಪೂರ್ವ ಕಾಲೇಜು ಪುತ್ತೂರು ಇಲ್ಲಿ ಜರಗಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಟ್ರಾನ್ಸ್ ಪೋರ್ಟ್ ಎಂಡ್ ಕಮ್ಯುನಿಕೇಶನ್ ವಿಷಯದಲ್ಲಿ ಧ್ಯಾನ್.ಎಸ್.ರಾವ್ ಮತ್ತು ಪ್ರೇಕ್ಷಣ್ (ಪ್ರಥಮ), ಗಣಿತ ಮಾದರಿಯಲ್ಲಿ ಸುಮೇಧ್ ನಾವಡ ಮತ್ತು ಅದ್ವೈತ್ ಶೆಟ್ಟಿ (ಪ್ರಥಮ), ತ್ಯಾಜ್ಯ ನಿರ್ವಹಣೆಯಲ್ಲಿ ವಿಜಿತ್ ಮತ್ತು ಶರೊನ್ ಶಶಿಧರ್ (ದ್ವಿತೀಯ), ಸಂಪನ್ಮೂಲ ನಿರ್ವಹಣೆಯಲ್ಲಿ ನಿಶ್ಚಯ್ ರೈ ಮತ್ತು ದೈವಿಕ್ ರಾಜೇಶ್ (ತೃತೀಯ), ಕೃಷಿ ತಂತ್ರಜ್ಞಾನ ಮತ್ತು ಸಾವಯವ ಕೃಷಿಯಲ್ಲಿ ರಾಕೇಶ್ಕೃಷ್ಣ ಮತ್ತು ಪ್ರಥಮ ಶೆಣೈ(ತೃತೀಯ), ಆರೋಗ್ಯ ಮತ್ತು ಸ್ವಚ್ಛತೆಯಲ್ಲಿ ಆದ್ಯ ಮತ್ತು ಇಶಾ (ತೃತೀಯ), ಬಹುಮಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.