ವಿದ್ಯಾಭಾರತಿ ರಾಜ್ಯಮಟ್ಟದ (ಪ್ರಾಂತಮಟ್ಟ) 17 ನೇ ಜ್ಞಾನ ವಿಜ್ಞಾನ ಮೇಳ 2018 ವು ಗುಲ್ಬರ್ಗಾ (ಕಲಬುರ್ಗಿ) ಜಿಲ್ಲೆಯ ಸೇಡಂನಲ್ಲಿ ಸೆಪ್ಟಂಬರ್ 7, 8, 9 ರಂದು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಇಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಥಮ ಸ್ಥಾನ ಗಳಿಸಿದ 4 ಮಕ್ಕಳು ದಕ್ಷಿಣ ಮಧ್ಯಕ್ಷೇತ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲವರ್ಗದಲ್ಲಿ ವರ್ಷ ಕೆ. (8ನೇ ತರಗತಿ)-ಸಂಸ್ಕೃತಿ ಜ್ಞಾನ ಪತ್ರವಾಚನದಲ್ಲಿ ಪ್ರಥಮ ಸ್ಥಾನ, ಆಶ್ರಯ (8ನೇ ತರಗತಿ)-ವೇದಗಣಿತ ಪತ್ರವಾಚನದಲ್ಲಿ ಪ್ರಥಮ ಸ್ಥಾನ, ಪ್ರಜ್ಞಾ ಮತ್ತು ಅನಘಾ.ಪಿ.ರಾವ್-ವಿಜ್ಞಾನ ಪ್ರದರ್ಶನದಲ್ಲಿ ತೃತೀಯ ಸ್ಥಾನ, ಯಶಸ್ವಿ ಶೆಟ್ಟಿ(8ನೇ ತರಗತಿ)-ವಿಜ್ಞಾನ ಪತ್ರವಾಚನದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕಿಶೋರವರ್ಗದಲ್ಲಿ ರಾಕೇಶ್‌ಕೃಷ್ಣ(9ನೇ ತರಗತಿ)-ವಿಜ್ಞಾನ ಸಂಶೋದನಾತ್ಮಕ ಮಾದರಿಯಲ್ಲಿ ಪ್ರಥಮ ಸ್ಥಾನ, ನಿಶ್ಚಯ ರೈ(9ನೇ ತರಗತಿ)-ವಿಜ್ಞಾನ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ, ಅನಘಾ ರಾವ್, ಶಿವಾನಿ,ಮತ್ತು ಅವನೀಶಾ(10ನೇ ತರಗತಿ)-ಸಂಸ್ಕೃತಿಜ್ಞಾನ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.