ದಿನಾಂಕ 26-9-2018 ನೇ ಬುಧವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ಕನ್ನಡ, ಆಂಗ್ಲ, ಸಂಸ್ಕೃತ ಹಾಗೂ ಹಿಂದಿ ಚತುರ್ಭಾಷಾ ಸಂಘಗಳ ಉದ್ಟಾಟನೆಯನ್ನು ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶ್ರೀಶ ಕುಮಾರ್ ಅವರು ನೆರವೇರಿಸಿ, ಯಾವುದೇ ದೇಶದ ಸಂಸ್ಕೃತಿಯ ಅರಿವು ಉಳಿವು ಅಲ್ಲಿನ ಭಾಷೆಯನ್ನವಲಂಬಿಸಿದೆ. ಆದ್ದರಿಂದ ನಾವು ಭಾಷೆಯನ್ನು ಪಳಗಿಸಿ ಕಾವ್ಯವಾಗಿಸಿಕೊಂಡರೆ ಭಾಷೆಯ ಸೊಗಸು ವರ್ಣನಾತೀತ ಎಂದು ಭಾಷಾ ಪ್ರಾಮುಖ್ಯತೆಯನ್ನು ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಮಾನವನ ಅಭಿವ್ಯಕ್ತಿಯ ಭಾಷೆ, ಬಹುಮುಖ್ಯ ಸ್ಥಾನವನ್ನು ವಹಿಸುತ್ತದೆ. ಪ್ರತೀ ಭಾಷೆಗೂ ಅದರದ್ದೇ ಆದ ವೈಶಿಷ್ಯವಿರುತ್ತದೆ. ತಾವು ಕಲಿಯುತ್ತಿರುವ ಭಾಷೆಯಲ್ಲಿ ಮಕ್ಕಳು ಆಸಕ್ತಿ ಪ್ರತಿಭೆ ತೋರಿಸಲು ಹಾಗೂ ಅವರ ಗುರುತಿಸುವಿಕೆಗೆ ಪ್ರತೀ ಶಾಲೆಯಲ್ಲಿ ಒಂದು ಭಾಷಾಸಂಘವು ಅತ್ಯಗತ್ಯ ಎಂದು ಪ್ರಾಸ್ತಾವಿಕ ಮಾತುಗಳ್ನಾಡಿದರು. ಭಾಷಾ ಸಂಘದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ನಾಟಕ, ಭಾಷಣ, ಸ್ವರಚಿತ ಕವನಗಳನ್ನು ಓದಿ ತಮ್ಮ ಆಭಿರುಚಿ ಪಾಂಡಿತ್ಯವನ್ನು ಪ್ರದರ್ಶಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಮುರಳೀಧರ.ಕೆ, ಭಾಷಾ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.